





ಪೆರುವಾಜೆ : ಮಕ್ಕಳಿಗಾಗಿ ಸಂಸ್ಕಾರ ದೀಪಿಕಾ ತರಗತಿಯನ್ನು ಪೆರುವಾಜೆ ಶ್ರೀ ಜಲದುರ್ಗಾ ದೇವಸ್ಥಾನದಲ್ಲಿ ನಡೆಸಲು ನಿರ್ಧರಿಸಲಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯು ನ.29 ರಂದು ಸಂಜೆ 4 ಗಂಟೆಗೆ ಜಲದುರ್ಗಾ ದೇವಸ್ಥಾನದಲ್ಲಿ ನಡೆಯಲಿದೆ.


ಹಿಂದೂ ಧರ್ಮದ ಆಚರಣೆಗಳು, ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ಶ್ಲೋಕಗಳು, ಐತಿಹಾಸಿಕ, ಪೌರಾಣಿಕ ಕಥೆಗಳು, ದೇವರನಾಮ,ಭಜನೆಗಳು, ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳು, ದೈಹಿಕ ಸ್ವಾಸ್ಥ್ಯ ಕ್ಕೆ ಅನುಕೂಲಕರವಾದ ಲಘು ಯೋಗಾಸನಗಳು ಅಲ್ಲದೆ ಇನ್ನಿತರ ಮೌಲ್ಯಯುತ ವಿಚಾರಗಳನ್ನು ಒಳಗೊಂಡ ತರಗತಿಯೇ ಸಂಸ್ಕಾರ ದೀಪಿಕಾ. ವಾರದಲ್ಲಿ ಒಂದು ದಿನ ಮಕ್ಕಳಿಗಾಗಿ ಈ ತರಗತಿ ನಡೆಯಲಿದೆ.





ಪೂರ್ವಭಾವಿ ಸಭೆಗೆ ಎಲ್ಲರೂ ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿ ಈ ಧಾರ್ಮಿಕ ಶಿಕ್ಷಣ ತರಗತಿಯನ್ನು ಪ್ರಾರಂಭಿಸುವಲ್ಲಿ ಪೂರ್ಣ ಸಹಕಾರವನ್ನು ನೀಡಬೇಕಾಗಿ ಅಪೇಕ್ಷಿಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಶ್ವೇತಾ ಕಾನಾವು : 7899579024, ಅಶ್ವಿನಿ ಕೋಡಿಬೈಲು : 9591967481 ಅವರನ್ನು ಸಂಪರ್ಕಿಸಬಹುದು.









