





ಪುತ್ತೂರು:ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು(ಸಂಯೋಜಿತ:ಬ್ಯಾಂಕ್ ಆಫ್ ಬರೋಡ), ಕಾವು ಈಶ್ವರಮಂಗಲ ಗ್ರಾಮ ಸಮಿತಿ, ಲಯನ್ಸ್ ಜಿಲ್ಲೆ 317ಡಿ, ಪ್ರಾಂತ್ಯ VII ವಲಯ-IIರ ಲಯನ್ಸ್ ಕ್ಲಬ್ ಪುತ್ತೂರು ಕಾವು ಇವರ ಸಹಭಾಗಿತ್ವದಲ್ಲಿ ಸುದಾನ ಪದವಿ ಪೂರ್ವ ಕಾಲೇಜು ಇದರ ಆಶ್ರಯದಲ್ಲಿ “ವೃತ್ತಿ ಮಾರ್ಗದರ್ಶನ” ಕಾರ್ಯಕ್ರಮ ನ.29 ರಂದು ಅಪರಾಹ್ನ ಎಡ್ವರ್ಡ್ ಕಾನ್ಸರೆನ್ಸ್ ಹಾಲ್ ನಲ್ಲಿ ಜರಗಲಿದೆ.


ಮಂಜಲ್ಪಡ್ಪು ಸುದಾನ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ರೆ|ವಿಜಯ ಹಾರ್ವಿನ್ ರವರು ಉದ್ಘಾಟನೆ ನೆರವೇರಿಸಲಿದ್ದಾರೆ. ಲಯನ್ ಜಿಲ್ಲೆ 317ಡಿ ಜಿಲ್ಲಾ ರಾಯಭಾರಿ ಹಾಗೂ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿರವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಪೋಸ್ಟಲ್ ಟೆಕ್ನಾಲಜಿ ಇದರ ನಿರ್ದೇಶಕ ಹರ್ಷ ನೆಟ್ಟಾರು ಐಎಎಸ್ ರವರು ನಾಗರಿಕ ಸೇವಾ ಪರೀಕ್ಷೆ ಏನು? ಹೇಗೆ ? ಎಂಬುದರ ಬಗ್ಗೆ, ಬ್ಯಾಂಕ್ ಆಫ್ ಬರೋಡದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್ ರವರು ಬ್ಯಾಂಕಿಂಗ್ ಹುದ್ದೆಗಳು, ಸಾಲಗಳ ಸೌಲಭ್ಯ ಹಾಗೂ ಶಿಕ್ಷಣ ಸಾಲದ ಬಗ್ಗೆ ಮಾತನಾಡಲಿದ್ದಾರೆ. ಗೌರವ ಉಪಸ್ಥಿತಿಯಾಗಿ ಲಯನ್ಸ್ ಕ್ಲಬ್ ಪುತ್ತೂರು ಕಾವು ಅಧ್ಯಕ್ಷ ಕೆ. ಇಬ್ರಾಹಿಂ ಹಾಜಿ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಆಡಳಿತ ಮಂಡಳಿ ಸದಸ್ಯ ಜಯಪ್ರಕಾಶ್ ರೈ, ಸುದಾನ ಪದವಿ ಪೂರ್ವ ಕಾಲೇಜಿನ ಸಂಚಾಲಕ ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಕೋಶಾಧಿಕಾರಿ ಆಸ್ಕರ್ ಆನಂದ್, ಪ್ರಾಂಶುಪಾಲ ಸುಪ್ರೀತ್ ಕೆ.ಸಿ., ಪುತ್ತೂರು ಬ್ಯಾಂಕ್ ಆಫ್ ಬರೋಡದ ಹಿರಿಯ ಪ್ರಬಂಧಕ ಬಾಲು ಬಿ.ಆರ್., ದರ್ಬೆ ಶಾಖೆಯ ಮುಖ್ಯ ವ್ಯವಸ್ಥಾಪಕ ಭರತ್ ಹೆಚ್.ವಿ. ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಕಾವು ಈಶ್ವರಮಂಗಲ ಘಟಕದ ಅಧ್ಯಕ್ಷ ಬಿ. ಪಾವನರಾಮರವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.














