ಲಂಚಕ್ಕೆ ಬೇಡಿಕೆ : ಸರ್ವೆಯರ್ ಸಹಿತ ಮೂವರು ಲೋಕಾಯುಕ್ತ ವಶಕ್ಕೆ

0

ಪುತ್ತೂರು: ಸಂಬಳದ ಬಿಲ್ ಮಾಡಿಕೊಡಲು ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯದಲ್ಲಿ ಮುಂದುವರಿಸಲು ನೇಮಕಾತಿ ಆದೇಶವನ್ನು ಮಾಡಿಸಿಕೊಡಲು ತಿಳಿಸಿದಾಗ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಹಿನ್ನಲೆಯಲ್ಲಿ ಸರ್ವೆಯರ್ ಕೃಷ್ಣಮೂರ್ತಿ, ಭೂದಾಖಲೆಗಳ ಸಹಾಯಕ ನಿರ್ದೇಶಕ ಬಿ.ಕೆ. ರಾಜು, ಸರ್ವೆ ಸುಪರ್‌ವೈಸರ್ ಎಸ್.ಧನಶೇಖರ ರನ್ನು ಮಂಗಳೂರು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಯು.ಪಿ.ಓ.ಆರ್ ಮಂಗಳೂರಿನಲ್ಲಿ ಹೊರಗುತ್ತಿಗೆ ನೌಕರರಾಗಿರುವ ವ್ಯಕ್ತಿಯೋರ್ವರ ಸಂಬಳದ ಬಿಲ್ ಮಾಡಿಕೊಡಲು ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯದಲ್ಲಿ ಮುಂದುವರಿಸಲು ನೇಮಕಾತಿ ಆದೇಶವನ್ನು ಮಾಡಿಸಿಕೊಡಲು ತಿಳಿಸಿದಾಗ ಉಳ್ಳಾಲ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಯ ಸರ್ವೆಯರ್ ಕೃಷ್ಣಮೂರ್ತಿ, ರೂ 50,000/- (ಐವತ್ತು ಸಾವಿರ) ಮಂಗಳೂರು ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕ ಬಿ.ಕೆ. ರಾಜು ರೂ 10,000/- (ಹತ್ತು ಸಾವಿರ), ಮಂಗಳೂರು ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಯ ಸರ್ವೆ ಸುಪರ್‌ವೈಸರ್ ಎಸ್.ಧನಶೇಖರ ರೂ 10,000/- (ಹತ್ತು ಸಾವಿರ) ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ನ.27ರಂದು ಉಳ್ಳಾಲ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಯ ಸರ್ವೆಯರ್ ಕೃಷ್ಣಮೂರ್ತಿ ರೂ. 20,000/- (ಇಪ್ಪತ್ತು ಸಾವಿರ), ಮಂಗಳೂರು ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕ ಬಿ.ಕೆ. ರಾಜು 5000 (ಐದು ಸಾವಿರ), ಎಸ್.ಧನಶೇಖರ, ಸರ್ವೆ ಸುಪರ್‌ವೈಸರ್, ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿ ಮಂಗಳೂರು ತಾಲೂಕು 5000 (ಐದು ಸಾವಿರ) ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ. ಸದರಿಯವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಲೋಕಾಯುಕ್ತ ಎಸ್ಪಿ (ಪ್ರಭಾರ) ಕುಮಾರ್ ಚಂದ್ರ ನೇತೃತ್ವದಲ್ಲಿ, ಡಿವೈಎಸ್ಪಿ ಡಾ.ಗಾನ.ಪಿ. ಕುಮಾರ್, ಸುರೇಶ್ ಕುಮಾರ್ ಪಿ, ಇನ್ಸ್ಪೆಕ್ಟರ್ ಭಾರತಿ, ಚಂದ್ರಶೇಖರ್ ಕೆ.ಎನ್, ರವಿ ಪವಾರ್, ರಾಜೇಂದ್ರ ನಾಯ್ಕ್, ಸಿಬ್ಬಂದಿಗಳಾದ ಮಹೇಶ್, ರಾಜಪ್ಪ, ರಾಧಾಕೃಷ್ಣ, ಆದರ್ಶ್ , ರಾಮ ನಾಯ್ಕ, ವಿವೇಕ್, ವಿನಾಯಕ, ಪ್ರವೀಣ್,ಗಂಗಣ್ಣ, ನಾಗಪ್ಪ, ಮಹಾದೇವ, ಪವಿತ್ರ, ಲಕ್ಷ್ಮಿ ದೇವಿ, ದುಂಡಪ್ಪ, ರುದ್ರಗೌಡ, ರಾಜಶೇಖರ್ , ರವಿ ಪವಾರ್ ಹಾಗೂ ಉಡುಪಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

LEAVE A REPLY

Please enter your comment!
Please enter your name here