




ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಸ್ತುಬದ್ಧ ನಿಯಮಗಳನ್ನು ಕಲಿಸುವುದು ಪೋಷಕರ ಜವಾಬ್ದಾರಿ: ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ



ಉಪ್ಪಿನಂಗಡಿ: ಸರ್ವೋದಯ ಪ್ರೌಢಶಾಲೆ ಪೆರಿಯಡ್ಕ ಇಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಆಶೀರ್ವಚನ ನೀಡಿದ ಸಂಸ್ಥೆಯ ಕಾರ್ಯದರ್ಶಿಗಳೂ ಆದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು, ಮಕ್ಕಳು ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳುವ ಕೆಲಸವನ್ನು ಪೋಷಕರು ಮಾಡಬೇಕು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಸ್ತುಬದ್ಧ ನಿಯಮಗಳನ್ನು ಕಲಿಸುವುದು ಅವಶ್ಯಕತೆ ಆಗಿರುತ್ತದೆ. ವಿದ್ಯಾರ್ಥಿಗಳು ಕೂಡ ತಮ್ಮ ನಡೆ-ನುಡಿ, ವಿನಯತೆ, ವಿನಮ್ರತೆ, ವಿನಯಶೀಲತೆ, ಗುರು-ಹಿರಿಯರನ್ನ ಗೌರವಿಸುವ ಗುಣವನ್ನು ಬೆಳೆಸಿಕೊಂಡರೆ ವಿದ್ಯೆ ತಾನಾಗಿ ಒಲಿಯುತ್ತದೆ ಎಂದು ನುಡಿದರು.





ಸಂಸ್ಥೆಯ ಪರಿವೀಕ್ಷಕರಾದ ಬಾಲಕೃಷ್ಣ ಗೌಡ ಬಿ.ಟಿ. ಅವರು ಮಾತನಾಡಿ, ವಿದ್ಯಾರ್ಥಿಗಳು ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಾಗ ಗುರುತಿಸಿ ಗೌರವಿಸಿಕೊಳ್ಳುವ ಅವಕಾಶ ಇಂತಹ ವೇದಿಕೆಯಲ್ಲಿ ನಡೆಯುತ್ತದೆ ಎಂದು ಹೇಳಿ ಶುಭ ಹಾರೈಸಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶೀನಪ್ಪ ಗೌಡ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಲಕ್ಷ್ಮಿ ಪಿ ವರದಿ ವಾಚಿಸಿದರು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ಮೋಹನ್ ಎಚ್. ನಿತ್ಯ ಬಿ. ನಿರೂಪಿಸಿದರು. ಡೊಂಬಯ್ಯ ಗೌಡ, ಮಾಯಿಲಪ್ಪ ನಾಯ್ಕ್ ಸಹಕರಿಸಿದರು. ಶಿಕ್ಷಕಿಯರಾದ ಶಕುಂತಲಾ ಕೆ.ಸ್ವಾಗತಿಸಿ, ಭವ್ಯ ವೈ ವಂದಿಸಿದರು.ಸವಿತಾ ಪಿ.ಸಿ ಕಾರ್ಯಕ್ರಮ ನಿರೂಪಿಸಿದರು










