ಪುತ್ತೂರು ಕಲ್ಲಾರೆ ರಾಘವೇಂದ್ರ ಮಠದಲ್ಲಿ ಗೀತಾ ಜಯಂತಿ ಆಚರಣೆ

0

ಪುತ್ತೂರು: ಕಲ್ಲಾರೆ ಶ್ರೀಗುರು ರಾಘವೇಂದ್ರ ಮಠದಲ್ಲಿ ನವ್ಯಶ್ರೀ ಮಹಿಳಾ ಮಂಡಳಿ, ಶಿವಳ್ಳಿ ಸಂಪದ ಮಹಿಳಾ ವಿಭಾಗ, ವನಿತಾ ಸಮಾಜ, ವಿಶ್ವ ಹಿಂದೂ ಪರಿಷತ್ ಮಾತೃ ಶಕ್ತಿ ದುರ್ಗವಾಹಿನಿ ಹಾಗೂ ಶಾರದಾ ಗೀತಾ ಯಜ್ಞ ಬಳಗ ಪುತ್ತೂರು ವತಿಯಿಂದ ಡಿ.4ರಂದು ಗೀತಾ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತಾ ಭಗಿನಿಯರು ಭಗವದ್ಗೀತೆಯ 18 ಅಧ್ಯಾಯಗಳನ್ನು ಪಾರಾಯಣ ಮಾಡಿದರು. ರಾಘವೇಂದ್ರ ಉಡುಪ ಗೀತಾರತಿ ಮಾಡಿದರು. ಬಳಿಕ ಸಮಾರೋಪದ ಸಭೆ ನಡೆಯಿತು. ಅಧ್ಯಕ್ಷತೆಯನ್ನು ಪೂವಪ್ಪನವರು ವಹಿಸಿದ್ದರು. ಸುಧಾ ಹೆಬ್ಬಾರ್‌ರವರಿಂದ ಉಪನ್ಯಾಸ ನಡೆಯಿತು. ಪ್ರಸನ್ನ ಬಳ್ಳಾಲ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಸಂತಿ ಪ್ರಾರ್ಥಿಸಿದರು. ವೀಣಾ ಕೊಳತ್ತಾಯ ಸ್ವಾಗತಿಸಿ, ಪ್ರೇಮಲತಾ ರಾವ್ ವಂದಿಸಿದರು. ಜಯಲಕ್ಷ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here