




ಪುತ್ತೂರು: ಬಡಗನ್ನೂರು ಟೆಲಿಪೋನ್ ಎಕ್ಸೇಂಜ್ ಏರಿಯ ಬಳಿ ಬಿ.ಎಸ್.ಎನ್.ಎಲ್ ಕಂಪೆನಿಯವರು ಅಳವಡಿಸಿದ ಅಂಡರ್ ಗ್ರೌಂಡ್ ಕಾಪರ್ ಕೇಬಲ್ ಕಳವು ಮಾಡಿದ ಘಟನೆ ಡಿ.1ರಂದು ನಡೆದಿರುವ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ಬಡಗನ್ನೂರು ಟೆಲಿಪೋನ್ ಎಕ್ಸೇಂಜ್ ಏರಿಯಾ ಬಳಿ ಬಿ.ಎಸ್.ಎನ್.ಎಲ್ ಕಂಪೆನಿಯವರು ಅಳವಡಿಸಿದ ಅಂಡರ್ ಗ್ರೌಂಡ್ ಕಾಪರ್ ಕೇಬಲ್ ಪೀಸ್ 200 ಜೊತೆ ಮತ್ತು 100 ಜೊತೆ ಕಳ್ಳತನವಾಗಿದೆ. ಟಾಟಾ ಗೂಡ್ಸ್ ವಾಹನದಲ್ಲಿ ಬಂದವರು ಈ ಕಳವು ಮಾಡಿರುವುದಾಗಿ ಗ್ರಾಹಕರೊಬ್ಬರು ಬಿಎಸ್ಎನ್ಎಲ್ ಕಚೇರಿಗೆ ಕರೆ ಮಾಡಿ ತಿಳಿಸಿದ್ದಾರೆ. ಅದರಂತೆ ಬಿಎಸ್ಎನ್ಎಲ್ ಕಚೇರಿಯ ಸಬ್ಡಿವಿಜನಲ್ ಇಂಜಿನಿಯರ್ ಜ್ಯೋತಿ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.










