ಡಿ.6: ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಯಲ್ಲಿ ಸರ್ವೋದಯ ಕ್ರೀಡಾ ಸಿಂಚನ-2025

0

ಬಡಗನ್ನೂರು: ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳ, ಹಿರಿಯ ವಿದ್ಯಾರ್ಥಿಗಳ, ಶಿಕ್ಷಕರ, ಪೋಷಕರ ಕ್ರೀಡಾಕೂಟ- ಸರ್ವೋದಯ ಕ್ರೀಡಾ ಸಿಂಚನ 2025 ಡಿ. 6ರಂದು ಬೆಳಿಗ್ಗೆ ಗಂ.9ಕ್ಕೆ ಉದ್ಘಾಟನೆ ನಡೆಯಲಿದೆ.

ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ರವೀಂದ್ರ ಮಣಿಲತ್ತಾಯ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.

ಮಂಗಳೂರು ಬಂದರು ಠಾಣೆಯ ನಿವೃತ್ತ ಸಹಾಯಕ ಪೊಲೀಸ್ ಉಪನಿರೀಕ್ಷಕ ಎ.ರವೀಂದ್ರನಾಥ ರೈ ಬೋಳಂಕೂಡ್ಲು ಧ್ವಜಾರೋಹಣ ನೆರವೇರಿಸಲಿದ್ದಾರೆ. ಮಂಜುನಾಥ ರೋಡ್ ಲೈನ್ಸ್ ಮಾಲಕ ರವಿಶಂಕರ ಯಾದವ, ಬಜ ಇವರು ಕ್ರೀಡಾಜ್ಯೋತಿ ಪ್ರಜ್ವಲನೆ ಮಾಡಲಿದ್ದಾರೆ.

ಕಾರ್ಯಕ್ರಮವು ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಗಳ ಅಧ್ಯಕ್ಷ ಶಿವರಾಮ ಎಚ್.ಡಿ  ಅಧ್ಯಕ್ಷತೆಯ ನಡೆಯಲಿದೆ. 

ಖ್ಯಾತ ಉದ್ಯಮಿ ಸುರೇಶ್ ಕುಮಾರ್ ಕಮ್ಮಿಂಜೆ ಪುತ್ತೂರು, ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಯ ನಿವೃತ್ತ ನೌಕರ  ಮಹಾಲಿಂಗ ಮೂಲ್ಯ ಸಿ.ಎಚ್. ಸುಳ್ಯಪದವು ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಅಧ್ಯಕ್ಷ  ಶೇಷಪ್ಪ ಪೂಜಾರಿ ಕಡಮಗದ್ದೆ ಭಾಗವಹಿಸಲಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕ ಸುಖೇಶ್ ರೖೆ ಕುತ್ಯಾಳ  ಪ್ರಕಟಣೆಯಲ್ಲಿ  ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here