




ಪುತ್ತೂರು: ಬೊಳುವಾರು ಜೆ.ಕೆ ಕಾಂಪ್ಲೆಕ್ಸ್ನಲ್ಲಿ ಎಸ್.ಕೆ ಮೊಬೈಲ್ಸ್ ಡಿ.7ರಂದು ಶುಭಾರಂಭಗೊಳ್ಳಲಿದೆ. ಪುತ್ತೂರು ಜೆ.ಕೆ ಕನ್ಸ್ಟ್ರಕ್ಷನ್ನ ಜಯಕುಮಾರ್ ಆರ್ ನಾಯರ್ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಂಆರ್ಎಪಿ ಅಧ್ಯಕ್ಷ ಚೇತನ್ ಕುಮಾರ್, ಸ್ನೇಹ ಸಿಲ್ಕ್ಸ್ ಮಾಲಕ ಸತೀಶ್ ಎಸ್, ಓಂಕಾರ್ ಸ್ವೀಟ್ಸ್ನ ಚಂದ್ರಹಾಸ, ಸ್ಯಾಮ್ಸಂಗ್ ಡಿಸ್ಟ್ರಿಬ್ಯೂಟರ್ ನರಸಿಂಹ ಶೆಣೈ ಭಾಗವಹಿಸಲಿದ್ದಾರೆ. ಶುಭಾರಂಭ ಮತ್ತು ಹೊಸ ವರ್ಷದ ಪ್ರಯುಕ್ತ ಯಾವುದೇ ಸ್ಮಾರ್ಟ್ ಫೋನ್ ಖರೀದಿಗೆ ವಿಶೇಷ ಉಡುಗೊರೆ ಲಭ್ಯವಿದೆ ಎಂದು ಮಾಲಕ ಸಂಪತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








