




ಪುತ್ತೂರು: ಮಂಗಳೂರಿನ ಕುದ್ರೋಳಿಯಲ್ಲಿ ನಡೆದ ಪ್ರವೀಣ್ ಕುಮಾರ್ ಮೆಮೋರಿಯಲ್ ಕಪ್ 36ನೇ ರಾಜ್ಯಮಟ್ಟದ ಇಂಟರ್ ಡುಜೋ ಕರಾಟೆ ಚಾಂಪಿಯನ್ ಶಿಪ್ 2025 ಇವರು ನಡೆಸಿದ ಕರಾಟೆ ಸ್ಪರ್ಧೆಯಲ್ಲಿ ಅವಿ.ವಿ.ರೈ 50 ರಿಂದ 55 ಕೆ.ಜಿ. ಕಟಾ ಮತ್ತು ಕುಮಿಟೆ ಎರಡು ವಿಭಾಗದಲ್ಲಿಯೂ ಚಿನ್ನದ ಪದಕ ಮತ್ತು ಅನಿ.ವಿ.ರೈ 40ರಿಂದ 45 ಕೆ.ಜಿ. ಕಟಾ ವಿಭಾಗದಲ್ಲಿ ಬೆಳ್ಳಿ ಪದಕ ಮತ್ತು ಕುಮಿಟೆ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಶಿಕ್ಷಕ ಸುರೇಶ್ ಎಂ. ರವರಿಂದ ತರಬೇತಿ ಪಡೆಯುತ್ತಿರುವ ಇವರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಯಾಗಿರುವ ಅವಿ ವಿ ರೈ ಮತ್ತು ಮೂರನೇ ತರಗತಿ ವಿದ್ಯಾರ್ಥಿಯಾಗಿರುವ ಅನಿ ವಿ. ರೈ ರವರು ವಿನೋದ್ ರೈ ಮತ್ತು ಅಕ್ಷತಾ ವಿ.ರೈ ದಂಪತಿಯ ಪುತ್ರರಾಗಿದ್ದಾರೆ.














