




ಪುತ್ತೂರು: ಶ್ರೀರಾಮ ವಿದ್ಯಾಕೇಂದ್ರ ಹನುಮಾನ್ ನಗರ ಕಲ್ಲಡ್ಕ ಇಲ್ಲಿ ನಡೆದಂತಹ ಅಟಲ್ ಟಿಂಕರಿಂಗ್ ಫೆಸ್ಟ್ 2025 ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಇದರಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.




10ನೇ ತರಗತಿಯ ನಿರೀಕ್ಷಿತ್ ಹೆಗ್ಡೆ (ನಿಶ್ಚಯ್ ಕುಮಾರ್ ಹೆಗ್ಡೆ ಮತ್ತು ನಾಗರತ್ನ ದಂಪತಿ ಪುತ್ರ) ‘ಲಾಜಿಕ್ ಅಂಡ್ ಮ್ಯಾತ್ ಪಝಲ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 9ನೇ ತರಗತಿಯ ಪಿ ಕೆ ಶುಭನ್ (ಪದ್ಮನಾಭ ಕೆ ಮತ್ತು ರೇಖಾ ಪಿ ನಾಯ್ಕ್ ದಂಪತಿ ಪುತ್ರ) ಹಾಗೂ ಚಂದನ್ (ಶಾಂತರಾಮ ನಾಯಕ್ ಮತ್ತು ಕಾಂತಿಮಣಿ ದಂಪತಿ ಪುತ್ರ) ಅವರ ತಂಡ ಮತ್ತು ನಮೀಶ್ ( ಸತೀಶ್ ಪೂಜಾರಿ ಮತ್ತು ಜಯಶ್ರೀ ದಂಪತಿ ಪುತ್ರ) ಹಾಗೂ ಪೂರ್ವಿ ಜೆ ಎ (ಜನಾರ್ಧನ ಎ ಮತ್ತು ವೇದಾವತಿ ಎಸ್ ದಂಪತಿ ಪುತ್ರಿ ) ಅವರ ತಂಡ ‘ಎಲ್ ಇ ಡಿ ಆರ್ಟ್ ಅಂಡ್ ಗ್ಲೋ’ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ, 10ನೇ ತರಗತಿಯ ಅಕ್ಷರ್ ಕೆ ಕೃಷ್ಣಯ್ಯ ಕೆ ಮತ್ತು ಸೊನಾಲಿ ದಂಪತಿ ಪುತ್ರ) ಹಾಗೂ ಪೃಥ್ವಿರಾಜ್ (ಗಣೇಶ್ ಭಂಡಾರಿ ಮತ್ತು ಲತಾ ದಂಪತಿ ಪುತ್ರ) ‘ಪೇಪರ್ ಪ್ಲೇನ್’ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ, 9ನೇ ತರಗತಿಯ ಕ್ಷಮೇತ್ ಜೈನ್ (ಹನೀಶ್ ಕುಮಾರ್ ಮತ್ತು ಶ್ರುತಿ ಕುಮಾರಿ ದಂಪತಿ ಪುತ್ರ) ಹಾಗೂ ಪ್ರಣವ್ ಪ್ರಭು (ಪದ್ಮನಾಭ ಪ್ರಭು ಹಾಗೂ ವಿದ್ಯಾ ಕುಮಾರಿ ದಂಪತಿ ಪುತ್ರ) ಅವರ ತಂಡ ‘ಸೈನ್ಸ್ ವರ್ಕಿಂಗ್ ಮಾಡೆಲ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 9ನೇ ತರಗತಿಯ ವಿದ್ಯಾರ್ಥಿಗಳಾದ ಸಮೃದ್ಧ್ ಆರ್ ಶೆಟ್ಟಿ (ರಾಮಚಂದ್ರ ಕೆ ಮತ್ತು ಶೋಭಾ ದಂಪತಿ ಪುತ್ರ) ಪ್ರೇಮ್ ಸಾಗರ್ (ಸುಧೀರ್ ಮತ್ತು ವಿನಯ ಪೈ ದಂಪತಿ ಪುತ್ರ) ‘ಎ ಟಿ ಎಲ್ ಮೆಮೊರಿ ಟೆಸ್ಟ್’ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿ ನಗದು ಸಹಿತ ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ಗಳಿಸಿಕೊಂಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














