




ಪುತ್ತೂರು: ಐತ್ತೂರು ಗ್ರಾಮದ ಕೋಕಳ ಕುಶಾಲಪ್ಪ ಪೂಜಾರಿ ಹಾಗೂ ವತ್ಸಲಾ ದಂಪತಿಗಳ ಪುತ್ರಿ ಪ್ರಜ್ಞಾ, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 3 ಕಿಮೀ ವೇಗ ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.




ಗ್ರಾಮೀಣ ಪ್ರದೇಶವಾದ ಬೆಥನಿ ನೂಜಿಬಾಳ್ತಿಲದಿಂದ ರಾಷ್ಟ್ರಮಟ್ಟದ ಮಟ್ಟಿಗೆ ಏರಿರುವ ಈ ಸಾಧನೆಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಮತ್ತಾಯಿ ಓಜೆ ಹಾಗೂ ಪುನೀತ್ ನೀಡಿದ ತರಬೇತಿ ಕಾರಣ ಎಂದು ಸಂಸ್ಥೆ ತಿಳಿಸಿದೆ. ವಿದ್ಯಾರ್ಥಿಗಳ ಕ್ರೀಡೆಗೆ ಪೂರಕ ವಾತಾವರಣ ಒದಗಿಸುತ್ತಿರುವ ಶಿಕ್ಷಕರು, ಆಡಳಿತ ಮಂಡಳಿ, ರಕ್ಷಕ ಶಿಕ್ಷಕ ಸಂಘ ಹಾಗೂ ಹಿರಿಯ ವಿದ್ಯಾರ್ಥಿಗಳ ಸಹಕಾರಕ್ಕೆ ಸಂಸ್ಥೆ ಕೃತಜ್ಞತೆ ತಿಳಿಸಿದೆ.





ಡಿ.13ರಿಂದ 17ರವರೆಗೆ ಲಖ್ನೌನಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಜ್ಞಾ ಭಾಗವಹಿಸಲಿದ್ದಾರೆ.









