




ರಾಮಕುಂಜ: ಇಲ್ಲಿನ ಬಾರಿಂಜ ಕುಟುಂಬಸ್ಥರ ಸೇವಾರ್ಥವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಡಿ.10ರಂದು ಸಂಜೆ ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.



ಸಂಜೆ 6.15ಕ್ಕೆ ಚೌಕಿ ಪೂಜೆ, ಪ್ರಸಾದ ವಿತರಣೆ, 6.45ರಿಂದ ಯಕ್ಷಗಾನ ಬಯಲಾಟ ಆರಂಭವಾಗಲಿದೆ. ರಾತ್ರಿ 8.30ರಿಂದ ಅನ್ನಸಂತರ್ಪಣೆ ನಡೆಯಲಿದೆ ಎಂದು ಸೇವಾರ್ಥಿಗಳಾದ ಬಾರಿಂಜ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














