




ಪುತ್ತೂರು: ಪುತ್ತೂರು ಕೋಟಿ ಚೆನ್ನಯ ಕೆ.ಯಸ್.ಆರ್.ಟಿ.ಸಿ ಬಸ್ಸು ನಿಲ್ದಾಣಕ್ಕೆ ಬರುವ ಬಸ್ ಮತ್ತು ಇತರ ವಾಹನಗಳು ಪ್ರನ ರಸ್ತೆ ಯಿಂದ ಅರುಣ ಚಿತ್ರಮಂದಿರದ ಬಳಿ ತಿರುಗಿ ಎಪಿಎಂಸಿ ರಸ್ತೆ ಪ್ರವೇಶಿಸಿ, ಸಿಟಿ ಆಸ್ಪತ್ರೆಯ ಮುಂಭಾಗದಿಂದ ಪುತ್ತೂರು ಕೆಎಸ್.ಆರ್.ಟಿಸಿ ಬಸ್ ನಿಲ್ದಾಣಕ್ಕೆ ಬರುವ ರಸ್ತೆಯು ಕಿರಿದಾದ ಮತ್ತು ಏರು ರಸ್ತೆಯಾಗಿದ್ದು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಇದೇ ರಸ್ತೆಯಲ್ಲಿ ಹೋಗಬೇಕಾಗಿರುತ್ತದೆ. ಸದರಿ ರಸ್ತೆಯು ದ್ವಿಮುಖ ಸಂಚಾರ ರಸ್ತೆಯಾಗಿದ್ದು, ಒಂದು ಬದಿಯಲ್ಲಿ ಹೊಸದಾಗಿ ಒಳಚರಂಡಿಯ ವ್ಯವಸ್ಥೆಯನ್ನು ಮಾಡಿರುವುದರಿಂದ ರಸ್ತೆ ಇನ್ನಷ್ಟು ಕಿರಿದಾಗಿರುತ್ತದೆ. ಇದರಿಂದ ಎರಡು ವಾಹನಗಳು ಸುಗಮವಾಗಿ ಚಲಿಸಲು ಸಾಧ್ಯವಾಗುವುದಿಲ್ಲ.




ಆದರಿಂದ ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದಿಂದ ತುಸು ಮುಂದಕ್ಕೆ ಅಂಬಿಕಾ ಶಾಲೆಗೆ ತಿರುಗುವ ರಸ್ತೆ ಬಳಿಯಿಂದ ಸಿಟಿ ಅಸ್ಪತ್ರೆಯ ಮುಂಭಾಗ ಎಪಿಎಂಸಿ ರಸ್ತೆಗೆ ಸೇರುವವರೆಗಿನ ಸುಮಾರು 100 ಮೀಟರ್ ಉದ್ದದ ರಸ್ತೆಯಲ್ಲಿ ಪ್ರವೇಶವಿಲ್ಲ (no entry), ಬೋರ್ಡ್ ಅಳವಡಿಸಿ, ಸಿಟಿ ಆಸ್ಪತ್ರೆಯಿಂದ ಬಸ್ ನಿಲ್ದಾಣದವರೆಗಿನ ರಸ್ತೆಯನ್ನು ಏಕಮುಖ ಸಂಚಾರ ರಸ್ತೆಯನ್ನಾಗಿ ಆದೇಶ ಮಾಡುವಂತೆ ರಾಜ್ಯ ಸಾರಿಗೆ ನೌಕರರ ಸಂಘದಿಂದ ಮನವಿ ಸಲ್ಲಿಸಲಾಯಿತು. ನಗರಸಭೆ ಆಯುಕ್ತರಿಗೆ , ಸಹಾಯಕ ಕಮಿಷನರ್, ನಗರಸಭೆ ಪೌರಾಯುಕ್ತರು, ಸಂಚಾರಿ ಠಾಣೆಯ ವೃತ್ತ ನೀರಿಕ್ಷಕರಿಗೆ ಮತ್ತು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಈ ಕುರಿತು ಮನವಿ ಸಲ್ಲಿಸಲಾಗಿದೆ. ಕೆಎಸ್ ಆರ್ ಟಿಸಿ ಸ್ಟಾಫ್ ವರ್ಕರ್ಸ್ ಯೂನಿಯನ್ ಪುತ್ತೂರು ವಿಭಾಗದ ವತಿಯಿಂದ ಮನವಿ ಸಲ್ಲಿಸಲಾಗಿದ್ದು, ಸಂಘದ ಕಾರ್ಯದರ್ಶಿ ಕೋಚಣ್ಣ ಪೂಜಾರಿ, ಚಾಲಕರಾದ ಅಬ್ದುಲ್ ಅಝೀಝ್, ಶಶಿಧರ, ಲೋಕೆಶ್ ಚಾಲಕರು ಸುಳ್ಯ, ಪ್ರಕಾಶ್ ಮೊಂತೋರೋ ಜೊತೆಗಿದ್ದರು.











