









ಸವಣೂರು : ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಕರಾವಳಿಯ ಏಕೈಕ ಮಹಿಳಾ ಶಾಸಕರಾಗಿದ್ದು, ಹಿಂದುಳಿದ ಸಮುದಾಯದಿಂದ ಬಂದು ಪ್ರಾಮಾಣಿಕವಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಿಳಾ ಶಾಸಕರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೀಳುಮಟ್ಟದ ಪೋಸ್ಟ್ ಹಾಕಿರುವುದು ಅತ್ಯಂತ ಖಂಡನೀಯ. ಇದು ಇಡೀ ಮಹಿಳಾ ಸಮಾಜಕ್ಕೆ ಮಾಡಿದ ಅವಮಾನ.



ಕೀಳು ಮಟ್ಟದ ಟೀಕೆಗಳನ್ನು ನಾಗರಿಕ ಸಮಾಜ ಎಂದಿಗೂ ಒಪ್ಪಲು ಸಾಧ್ಯವಿಲ್ಲ, ಅವು ವಿಕೃತ ಮನಸ್ಸಿನ ಆಲೋಚನೆಗಳ ಅತಿರೇಕದ ವರ್ತನೆಯಾಗಿದೆ. ಜಾಲತಾಣದಲ್ಲಿ ಯಾವುದೇ ಜನಪ್ರತಿನಿಧಿಗಳನ್ನು ತೇಜೋವಧೆ ಮಾಡಿರುವುದು ಅತ್ಯಂತ ಗಂಭೀರ ಹಾಗೂ ಖಂಡನೀಯ ವಿಚಾರ. ಪೋಲಿಸ್ ಇಲಾಖೆ ಕೂಡಲೇ ಕೇಸ್ ದಾಖಲು ಮಾಡಿ ಪೋಸ್ಟ್ ಹಾಕಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಸುಳ್ಯ ಮಂಡಲ ಎಸ್.ಟಿ.ಮೋರ್ಚಾ ಅಧ್ಯಕ್ಷ ಸವಣೂರಿನ ಗಂಗಾಧರ ಪೆರಿಯಡ್ಕ ಅವರು ಒತ್ತಾಯಿಸಿದ್ದಾರೆ.










