








ನೆಲ್ಯಾಡಿ: ಜ.16ಹಾಗೂ 17ರಂದು ನಡೆಯಲಿರುವ ಆಲಂತಾಯ ಸರಕಾರಿ ಹಿ.ಪ್ರಾ.ಶಾಲೆ ಶತಮಾನೋತ್ಸವ ಸಂಭ್ರಮ 2026ಕ್ಕೆ ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ ಜ.15ರಂದು ಬೆಳಿಗ್ಗೆ ನಡೆಯಿತು. ಬೆಳಿಗ್ಗೆ ಶಾಲಾ ಬ್ಯಾಂಡ್ ಸೆಟ್ ಹಾಗೂ ಮೆರವಣಿಗೆಯೊಂದಿಗೆ ವಿವಿಧ ಕಡೆಗಳಿಂದ ಆಗಮಿಸಿದ ಹೊರೆಕಾಣಿಕೆಗಳನ್ನು ಬರಮಾಡಿಕೊಳ್ಳಲಾಯಿತು.



ಈ ಸಂದರ್ಭದಲ್ಲಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಅಶೋಕ ಸಿ.ಬಿ.ಆಲಂತಾಯ, ಮುಖ್ಯಶಿಕ್ಷಕಿ ಲವ್ಲಿಜೋಸ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಂದರ ಪಾಲೇರಿ, ವಿವಿಧ ಸಮಿತಿ ಸಂಚಾಲಕರಾದ ಮನೋಹರ್ ಕೆ.ಆರ್.ಕೊಳೆಂಜಿರೋಡಿ, ಚಂದ್ರಶೇಖರ ಅಲಂಗಪ್ಪೆ, ಪವಿತ್ರ ಪೆರ್ನಾರ್, ಬಾಬು ಅಲಂಗಪ್ಪೆ, ಪುರುಷೋತ್ತಮ ಆಚಾರ್ಯ ಸೇನೆರೆಕೆರೆ, ಈಶ್ವರ ಭಟ್ ಪೆರ್ನಾರ್, ಧರ್ಣಪ್ಪ ಗೌಡ ಬೆದ್ರಗುಡ್ಡೆ, ಮುರಳೀಕೃಷ್ಣ ಭಟ್ ಹಡೀಲು, ಸತೀಶ್ ಅಲಂಗಪ್ಪೆ, ಜಿನ್ನಪ್ಪ ಗೌಡ ಶಿವಾರು, ಶಿವಪ್ರಸಾದ್ ಶಿವಾರು, ಸುಮಿತ್ ಪುಲಾರ, ಚಂದ್ರಶೇಖರ ಆಲಂತಾಯ, ಧನರಾಜ್ ಪಾಲೇರಿ, ವಾಣಿ ಎಸ್.ಶೆಟ್ಟಿ, ಕೊರಗಪ್ಪ ಅರಂತಬೈಲು, ಸಹಶಿಕ್ಷಕರಾದ ವರ್ಗೀಸ್ ಕೆ.ಪಿ., ರಮೇಶ ದೊಡವಾಡ, ರಶ್ಮಿ ಪಿ., ನವ್ಯಶ್ರೀ, ದೀಕ್ಷಿತಾ ಪಿ.ಆರ್., ಎಸ್ಡಿಎಂಸಿ ಉಪಾಧ್ಯಕ್ಷೆ ಶಶಿಕಲಾ, ಶತಮಾನೋತ್ಸವದ ಕಾರ್ಯದರ್ಶಿ ಬಾಲಕೃಷ್ಣ ಅಲಂಗಪ್ಪೆ, ಗ್ರಾ.ಪಂ.ಅಧ್ಯಕ್ಷೆ ಸವಿತಾ, ಸದಸ್ಯ ಪದ್ಮನಾಭ ಪೆರ್ನಾರ್, ಬಾಬು ನಾಯ್ಕ್ ಅಲಂಗಪ್ಪೆ, ನೀಲಪ್ಪ ನಾಯ್ಕ್ ಅಲಂಗಪ್ಪೆ ಸೇರಿದಂತೆ ವಿವಿಧ ಸಮಿತಿ ಸದಸ್ಯರು, ಎಸ್ಡಿಎಂಸಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.














