







ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿಶ್ವೇಶ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಇದರ 2025-26ನೇ ಸಾಲಿನ ವಾರ್ಷಿಕ ಮೇಳ ಫೆ.28 ಹಾಗೂ ಮಾ.1ರಂದು ಬಾರಿಕೆ ಕೊಡಿಪಾನ ಕುಟುಂಬಸ್ಥರ ಮನೆಯ ವಠಾರದಲ್ಲಿ ನಡೆಯಿತು.


ಬಾರಿಕೆ ಕೊಡಿಪಾನ ಕುಟುಂಬಸ್ಥರು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳನ್ನು ಆರತಿ ಬೆಳಗಿ ತಿಲಕವಿಟ್ಟು ಬರಮಾಡಿಕೊಂಡರು. ಸ್ಕೌಟ್ಸ್ ಮಾಸ್ರ್ಸ್, ಗೈಡ್ಸ್ ಕ್ಯಾಪ್ಟನ್ ಮತ್ತು ಬಾರಿಕೆ ಕುಟುಂಬಸ್ಥರ ಉಪಸ್ಥಿತಿಯಲ್ಲಿ ಧ್ವಜಾರೋಹಣ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಕರಕುಶಲ ವಸ್ತುಗಳ ತಯಾರಿಕೆ, ಡ್ರಾಯಿಂಗ್, ಸ್ಪರ್ಶ, ಗ್ರಹಣ ಶಕ್ತಿಗಳ ಚಟುವಟಿಕೆಗಳನ್ನು ಮಾಡಲಾಯಿತು. ಶಿಬಿರಾಗ್ನಿ ಕಾರ್ಯಕ್ರಮವನ್ನು ಉಪ್ಪಿನಂಗಡಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷರೂ, ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಶಿಬಿರಾಗ್ನಿ ಕಾರ್ಯಕ್ರಮ ಉದ್ಘಾಟಿಸಿದರು. ರಾತ್ರಿ ಗಂಟೆ 8.3ರಿಂದ ಮಧ್ಯರಾತ್ರಿ 1.00ಗಂಟೆಯ ತನಕ ಶಿಬಿರಾಗ್ನಿಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.



ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಮತ್ತು ಊರಿನವರ ಸಂಭ್ರಮದೊಂದಿಗೆ ಕಾರ್ಯಕ್ರಮ ನಡೆಯಿತು. ಮರುದಿನ ಬೆಳಗ್ಗೆ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಶಿಬಿರ ಡ್ಯಾಂ ವೀಕ್ಷಣೆ, ನದಿನೀರಿನಲ್ಲಿ ಆಟ, ಅನುಭವಗಳ ಹಂಚಿಕೆ, ಮಧ್ಯಾಹ್ನದ ಭೋಜನೊಂದಿಗೆ ಸಂಪನ್ನಗೊಂಡಿತು.










