







ಪುತ್ತೂರು:2025-26ನೇ ಸಾಲಿನ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ವೀರಮಂಗಲ ಮದ್ರಸ ಶೇ.100 ಫಲಿತಾಂಶ ಪಡೆದುಕೊಂಡಿದೆ. 7ನೇ ತರಗತಿಯ ಖದೀಜತ್ ರಿಝಾ ಟಾಪ್ ಪ್ಲಸ್(490 ಅಂಕ) ಪಡೆದುಕೊಂಡಿದ್ದು ಸಕೀಬ್(453 ಅಂಕ) ಹಾಗೂ ಶಫೀಕ್(443 ಅಂಕ) ಪಡೆದುಕೊಂಡು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಗೊಂಡಿದ್ದಾರೆ. 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.


10ನೇ ತರಗತಿಯಲ್ಲಿ ಆಯಿಷತ್ ಸಫಾ, ತಮೀಂ ಹಾಗೂ ಸಫ್ವಾನ್, 7ನೇ ತರಗತಿಯಲ್ಲಿ ಝಾಯಿದ್, ಅಫ್ಝಲ್, ಅಫ್ಸಲ್, ಆಯಿಷತ್ ರಿಲಾ ಹಾಗೂ ಪಾತಿಮತ್ ರೈಫಾ, 5ನೇ ತರಗತಿಯಲ್ಲಿ ಮುಹಮ್ಮದ್ ರಾಝಿ, ಮಬಶ್ಶಿರ್, ಅಫ್ರ, ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ವೀರಮಂಗಲ ಮದ್ರಸದ ಮುಖ್ಯೋಪಾಧ್ಯಾಯರಾದ ನಿಯಾಝ್ ದಾರಿಮಿ ತಿಳಿಸಿದ್ದಾರೆ.













