







ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಮೂವತ್ತೇಳು ವರ್ಷದ ಸಂಭ್ರಮದಲ್ಲಿ ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳಾದ ವಿ. ಅಕ್ಷತಾ ಕನ್ನಡ್ಕ , ವಿ. ಅಪೂರ್ವ ಗೌರಿ , ವಿ. ವಿಭಾಶ್ರೀ ವಿ. ಗೌಡ ಮತ್ತು ಕು. ಪ್ರಣಮ್ಯ ಪಾಲೆಚ್ಚಾರು ಇವರು ನೃತ್ಯವನ್ನು ತಮ್ಮ ಗುರುಗಳಿಗೆ ಅರ್ಪಿಸುವ ’ನೃತ್ಯೋಪಸೇವನಂ’ ಎಂಬ ಗುರುವಂದನೆ ಕಾರ್ಯಕ್ರಮವನ್ನು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನೆರವೇರಿಸಿದರು.



ವಿದ್ಯಾರ್ಥಿಗಳು ತಮ್ಮ ಗುರುಗಳಾದ ವಿದ್ವಾನ್ ಬಿ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ದಂಪತಿ, ವಿದ್ವಾನ್ ಗಿರೀಶ್ ಕುಮಾರ್, ಸಂಸ್ಥೆಯ ಸಂಚಾಲಕಿ ಶಶಿಪ್ರಭಾ ಅವರನ್ನು ಸನ್ಮಾನಿಸಿದರು. ವಿವೇಕಾನಂದ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ. ವಿಜಯ ಸರಸ್ವತಿ ಅವರು ಅಭ್ಯಾಗತರಾಗಿ ಭಾಗವಹಿಸಿದ್ದರು. ವಿವೇಕಾನಂದ ಕನ್ನಡ ಶಾಲೆಯ ಮುಖ್ಯೋಪಾಧ್ಯಾಯಿನಿ ಆಶಾ ಬೆಳ್ಳಾರೆ, ಶಿಕ್ಷಕಿವೀಣಾ ಸರಸ್ವತಿ ನಿಡ್ವಣ್ಣಾಯ, ವಿವೇಕಾನಂದ ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ರಮೇಶ್ಚಂದ್ರ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ನೃತ್ಯ ಪ್ರಸ್ತುತಿ ಕಾರ್ಯಕ್ರಮ ನಡೆಯಿತು.




ಭರತ ನಟುವಾಂಗದಲ್ಲಿ ಗುರುಗಳಾದ ವಿದ್ವಾನ್ ದೀಪಕ್ ಕುಮಾರ್, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ಪವನ್ ಮಾಧವ್ ಬೆಂಗಳೂರು, ಕೊಳಲಿನಲ್ಲಿ ಕೃಷ್ಣ ಗೋಪಾಲ್ ಪುಂಜಾಲಕಟ್ಟೆ, ಪಿಟೀಲಿನಲ್ಲಿ ತನ್ಮಯಿ ಉಪ್ಪಂಗಳ ಸಹಕರಿಸಿದರು. ವಿದುಷಿ ಸೌಜನ್ಯ ಪಡುವೆಟ್ನಾಯ ಹಾಗೂ ತೇಜಸ್ವಿ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿದರು.











