







ಪುತ್ತೂರು: 2026-27ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲಾ ವಲಯ ಜೇನು ಸಾಕಾಣಿಕೆ ಯೋಜನೆಯಡಿ ಜೇನುಕೃಷಿ ತರಬೇತಿ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಲು ಅರ್ಜಿ ಆಹ್ವಾನಿಸಲಾಗಿದ್ದು ಹಾಗೂ ಮಧುವನ ಯೋಜನೆಯಲ್ಲಿ ಈ ಹಿಂದೆ ತರಬೇತಿ ಆಗಿ ಸರ್ಟಿಫಿಕೇಟ್ ಹೊಂದಿರುವ 10ಕ್ಕಿಂತ ಕಡಿಮೆ ಜೇನು ಪೆಟ್ಟಿಗೆ ಇಲಾಖೆಯಿಂದ ಸಹಾಯಧನದಲ್ಲಿ ಪಡೆದಿರುವ ರೈತರು ಪೆಟ್ಟಿಗೆಗೆ ಅರ್ಜಿ ನೀಡಬಹುದು ಆಸಕ್ತ ರೈತರು ದಿನಾಂಕ: 06/06/2026ರೊಳಗಾಗಿ ತೋಟಗಾರಿಕೆ ಇಲಾಖೆ ಸುಳ್ಯ ಕಚೇರಿಯಲ್ಲಿ ಹೆಸರು ನೋಂದಾಯಿಸಲು ಕೋರಿದೆ.


2026-27ನೇ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿ ಹನಿ ನೀರಾವರಿ ಅಳವಡಿಕೆಗೆ ಪ್ರತೀ ಫಲಾನುಭವಿಗೆ ಗರಿಷ್ಠ 5.00 ಹೆಕ್ಟರ್ ಪ್ರದೇಶದವರೆಗೆ ಸಹಾಯಧನಕ್ಕೆ ಅರ್ಜಿ ನೀಡಬಹುದು. ಕಾಫಿ, ಟೀ ಮತ್ತು ರಬ್ಬರ್ ಬೆಳೆಗಳನ್ನು ಹೊರತುಪಡಿಸಿ, ಉಳಿದೆಲ್ಲಾ ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ಲಭ್ಯವಿರುತ್ತದೆ. ರೈತರಿಗೆ ಶೇ.90ರಂತೆ 2.00 ಹೆಕ್ಟೇರ್ ವರೆಗೆ ಹಾಗೂ 2.00 ಹೆ.ನಿಂದ 5.00 ಹೆಕ್ಟೇರ್ ವರೆಗೆ ರೈತರಿಗೆ ಶೇ. 45ರ ಸಹಾಯಧನವಿರುತ್ತದೆ. ತೋಟಗಾರಿಕೆ ಬೆಳೆ ಹಾಗೂ ನೀರಾವರಿ ಮೂಲವನ್ನು ಹೊಂದಿರುವ ಆಸಕ್ತ ರೈತರು ದಿನಾಂಕ: 06/06/2026 ರೊಳಗಾಗಿ ನಿಗದಿತ ನಮೂನೆಯಲ್ಲಿ ಈ ಕಚೇರಿಗೆ ಅರ್ಜಿ ಸಲ್ಲಿಸಬಹುದು.



ಮಿಷನ್ ಯೋಜನೆಯಡಿ ತಾಲೂಕಿನ ಸಾಮಾನ್ಯ ವರ್ಗದ ರೈತರಿಗೆ ಗೇರು ಪ್ರದೇಶ ವಿಸ್ತರಣೆಗೆ 1.00 ಹೆ., ಅಂಗಾಂಶ ಬಾಳೆ ಪ್ರದೇಶ ವಿಸ್ತರಣೆಗೆ 1.00 ಹೆ. ರಾಂಬೂಟಾನ್ ಪ್ರದೇಶ ವಿಸ್ತರಣೆಗೆ 2 ಹೆ., ಡ್ರಾಗನ್ ಫೂಟ್ ಪ್ರದೇಶ ವಿಸ್ತರಣೆಗೆ 0.40 ಹೆ., ಮ್ಯಾಂಗೊಸ್ಟೀನ್ ಪ್ರದೇಶ ವಿಸ್ತರಣೆಗೆ 1.00 ಹೆ. , ಪರಿಶಿಷ್ಟ ಜಾತಿ ವರ್ಗದ ರೈತರಿಗೆ ಗೇರು ಪ್ರದೇಶ ವಿಸ್ತರಣೆಗೆ 0.50 ಹೆ. ಹಾಗೂ ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಗೇರು ಪ್ರದೇಶ ವಿಸ್ತರಣೆಗೆ 0.50 ಹೆ. ಗೆ ಶೇ. 40 ರಂತೆ ಸಹಾಯಧನಕ್ಕೆ ಗುರಿಯಿರುತ್ತದೆ ಆಸಕ್ತ ರೈತರು ನಿಗಧಿತ ನಮೂನೆಯ ಅರ್ಜಿ, ಪಹಣಿ ಪತ್ರ, ಆಧಾರ್ ಪ್ರತಿ, ಪಾಸ್ ಪುಸ್ತಕ ಪ್ರತಿ, ಸಂಖ್ಯೆ ಜಂಟಿಯಾಗಿದ್ದಲ್ಲಿ ಒಪ್ಪಿಗೆ ಪತ್ರ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ನಂಬರ್ ಇರುವಂತಹ ಜಾತಿ ಪ್ರಮಾಣ ಪತ್ರದೊಂದಿಗೆ ದಿನಾಂಕ 06/06/2026 ರೊಳಗೆ ಸಲ್ಲಿಸುವುದು ಜೇಷ್ಠತೆ ಅನುಸಾರ ಕಾರ್ಯದೇಶ ನೀಡಿದ ನಂತರ ಅಧಿಕೃತ ನರ್ಸರಿಯಿಂದ ಗಿಡ ಖರೀದಿಸಿ ನಾಟಿ ಮಾಡಿದ ನಂತರ ಸಹಾಯಧನ ರೈತರ ಖಾತೆಗೆ ಜಮೆ ಮಾಡಲಾಗುವುದು.










