ಕಾಮಜಲು ಶಾಲಾ ಮಂತ್ರಿಮಂಡಲ ರಚನೆ

0

ಮುಖ್ಯಮಂತ್ರಿ ಹರ್ಷಿತ್ ಕೆ, ಉಪಮುಖ್ಯಮಂತ್ರಿ ಸ್ಮಿತಾ ಎಸ್ ಕುಲಾಲ್ ಆಯ್ಕೆ

ಪುತ್ತೂರು: ಮಾಣಿಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಮಜಲು ಇಲ್ಲಿನ ಶಾಲಾ ಮಂತ್ರಿಮಂಡಲವನ್ನು ಇವಿಎಂ ಮತದಾನದ ಮೂಲಕ ರಚಿಸಲಾಯಿತು. ಶಾಲಾ ಮುಖ್ಯಮಂತ್ರಿಯಾಗಿ 7ನೇ ತರಗತಿಯ ಹರ್ಷಿತ್ ,ಉಪಮುಖ್ಯಮಂತ್ರಿಯಾಗಿ 6ನೇ ತರಗತಿಯ ಸ್ಮಿತಾ ಎಸ್ ಕುಲಾಲ್, ಶಿಕ್ಷಣ ಮಂತ್ರಿಯಾಗಿ ರಿಷಿಕಾ,ಹಣಕಾಸು ಮಂತ್ರಿಯಾಗಿ ದುರ್ಗಾಪ್ರಸಾದ್ ,ಆರೋಗ್ಯಮಂತ್ರಿಯಾಗಿ ಧೃತಿ ಎಸ್ ಕುಲಾಲ್,ಆಹಾರ ಮಂತ್ರಿಯಾಗಿ ಪ್ರಣತಿ ಕೆ, ಕ್ರೀಡಾ ಮಂತ್ರಿಯಾಗಿ ರಿಷಿಕ್ ಕೆ,ರಕ್ಷಣಾ ಮಂತ್ರಿಯಾಗಿ ಆದ್ವಿತ್,ಸಾಂಸ್ಕೃತಿಕ ಮಂತ್ರಿಯಾಗಿ ಸಾನ್ವಿ ಕೆ,ಕೃಷಿ ಹಾಗೂ ತೋಟಗಾರಿಕಾ ಮಂತ್ರಿಯಾಗಿ ನಿಖಿಲ್ ಹಾಗು ತನಿಷ್ ,ಸ್ವಚ್ಛತಾ ಮಂತ್ರಿಯಾಗಿ ಹನಿಶ್ರೀ, ನೀರಾವರಿ ಮಂತ್ರಿಯಾಗಿ ಹರ್ಷಿತ್ ಹಾಗೂ ಪ್ರಜ್ವಲ್, ಗ್ರಂಥಾಲಯ ಮಂತ್ರಿಗಳಾಗಿ ಮಾನ್ವಿ ಹಾಗೂ ಶ್ರಾವ್ಯ ವಾರ್ತಾಮಂತ್ರಿಯಾಗಿ ಫಾತಿಮತ್ ಅಪ್ನ,ಕಾನೂನು ಮಂತ್ರಿಯಾಗಿ ಶ್ರವಣ್ ಕುಮಾರ್,ವಿರೋಧ ಪಕ್ಷದ ನಾಯಕನಾಗಿ ಪ್ರಜ್ವಲ್ ಇವರು ಆಯ್ಕೆಯಾದರು.


ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸುಧಾ ಸಂದೇಶ್ ಪ್ರಮಾಣ ವಚನ ಬೋಧಿಸಿದರು .ಶಿಕ್ಷಕರಾದ ಸರಿತಾ ನಾಯ್ಕ, ಮಾಲತಿ ಎನ್ , ಸುಶ್ಮಿತಾ ಕೆ ಇವರು ಮತಗಟ್ಟೆ ಅಧಿಕಾರಿಗಳಾಗಿ ಮತದಾನ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here