







ಪುತ್ತೂರು: ಈಶ್ವರಮಂಗಲ ಹಿದಾಯತುಲ್ ಇಸ್ಲಾಂ ರಿಫಾಯಿಯಾ ಮದ್ರಸದಲ್ಲಿ ಮುಅಲ್ಲಿಂ ಡೇ ಆಚರಿಸಲಾಯಿತು. ಈಶ್ವರಮಂಗಲ ಖತೀಬ್ ಎನ್.ಪಿ.ಎಂ. ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಅಧ್ಯಕ್ಷತೆ ವಹಿಸಿ ದುವಾ ನೆರವೇರಿಸಿದರು.


ಪಿಟಿಎ ಕಮಿಟಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಕರ ಸೇವೆಯ ಮಹತ್ವವನ್ನು ವಿವರಿಸಿದರು. ವೇದಿಕೆಯಲ್ಲಿ ಜಮಾಅತ್ ಉಪಾಧ್ಯಕ್ಷ ಹಾರಿಸ್ ಪಿ.ಎಸ್, ಕಾರ್ಯದರ್ಶಿ ರಹ್ಮಾನ್ ಮೇನಾಲ, ಪಿಟಿಎ ಉಪಾಧ್ಯಕ್ಷ ಹನೀಫ್ ಕುದ್ರೋಳಿ, ಮುಅಲ್ಲಿಂಗಳಾದ ನಿಸಾರ್ ಯಮಾನಿ, ಶಿಹಾಬ್ ಸಖಾಫಿ, ಜಮಾಅತ್ ಪದಾಧಿಕಾರಿಗಳಾದ ಅಶ್ರಫ್ ಎ.ಬಿ, ಅದ್ದು ಬಂಡಂಗಲ್, ಪೋಷಕರಾದ ಹಕೀಮ್ ಮದನಿ ಹಾಗೂ ಹಾರಿಸ್ ಎಸ್.ಎಂ ಉಪಸ್ಥಿತರಿದ್ದರು.



ವಿದ್ಯಾರ್ಥಿಗಳು ಉಸ್ತಾದರಿಗೆ ಉಡುಗೊರೆ ನೀಡಿ ಗೌರವಿಸಿದರು. ಪಿಟಿಎ ಕಾರ್ಯದರ್ಶಿ ಹಾಗೂ ಸದರ್ ಮುಅಲ್ಲಿಂ ಇಸ್ಮಾಯಿಲ್ ದಾರಿಮಿ ಅವರು ಸ್ವಾಗತಿಸಿದರು. ಮುನೀರ್ ಸೈನಿ ವಂದಿಸಿದರು.










