







ಸುಳ್ಯ: ಲೋಕೋಪಯೋಗಿ ಇಲಾಖೆ ಸುಳ್ಯ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾಗಿ 3 ವರ್ಷ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ಗೋಪಾಲ್ ಅವರಿಗೆ ಅಲೆಟ್ಟಿ ಗ್ರಾಮಸ್ಥರ ಪರವಾಗಿ ಹಾಗೂ ಸುಳ್ಯ ನಗರ ಯೋಜನಾ ಪ್ರಾಧಿಕಾರ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.


ಅಲೆಟ್ಟಿ ಗ್ರಾಮ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸತ್ಯಕುಮಾರ್ ಆಡಿಂಜ ಮಾತನಾಡಿ, “ಅಲೆಟ್ಟಿ-ಬಡ್ಡಡ್ಕ-ಕೂರ್ನಡ್ಕ ರಸ್ತೆ ಅಭಿವೃದ್ಧಿಯ ಬಹುಕಾಲದ ಬೇಡಿಕೆಗೆ ಇಲಾಖೆಯಿಂದ ₹7 ಕೋಟಿ ಮಂಜೂರಾಗಲು ಗೋಪಾಲ್ ಅವರ ಪ್ರಯತ್ನ ಅಭಿನಂದನಾರ್ಹ. ಇಲಾಖೆಯನ್ನು ಜನಸ್ನೇಹಿಯನ್ನಾಗಿಸಿದ ಕೀರ್ತಿ ಗೋಪಾಲ್ ಅವರಿಗೆ ಸಲ್ಲುತ್ತದೆ” ಎಂದರು.



ಸುಳ್ಯ ಉಪ ವಿಭಾಗಕ್ಕೆ ನೂತನ ಎಇಇ ಆಗಿ ಅಧಿಕಾರ ವಹಿಸಿಕೊಂಡ ಪೂವಯ್ಯ ಅವರನ್ನು ಈ ಸಂದರ್ಭದಲ್ಲಿ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ. ಮುಸ್ತಫ, ಆಲೆಟ್ಟಿ ಗ್ರಾ.ಪಂ. ಮಾಜಿ ಸದಸ್ಯರಾದ ಗೀತಾ ಕೋಲ್ಚಾರ್, ಧರ್ಮಪಾಲ ಕೊಯಿಂಗಾಜೆ, ಮೀನಾಕ್ಷಿ ಕುಡೆಕಲ್ಲು, ಕೇಶವ ಮೊರಂಗಲ್ಲು, ಮಹೇಶ್ ಬೆಳ್ಳಾರ್ಕರ್, ಸಹಾಯಕ ಇಂಜಿನಿಯರ್ ಪರಮೇಶ್ವರ್, ಹಿರಿಯ ಗುತ್ತಿಗೆದಾರ ವೆಂಕಪ್ಪ, ನಿಸಾರ್ ಪೈಂಬಚ್ಚಾಲ್, ಹಸೈನಾರ್ ಪೈಂಬಚ್ಚಾಲ್ ಮೊದಲಾದವರು ಉಪಸ್ಥಿತರಿದ್ದರು.










