ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

0

ಪುತ್ತೂರು: ಪಿಎಂಶ್ರೀ ಕೆ.ಪಿ.ಎಸ್ ವೀರಮಂಗಲ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಎಸ್‌ಡಿಎಂಸಿ ಉಪಾಧ್ಯಕ್ಷೆ ವಿನುತ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಮುಖ್ಯಗುರು ತಾರಾನಾಥ ಸವಣೂರು ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಹೇಮಾವತಿ ಕಾರ್ಯಕ್ರಮ ಸಂಯೋಜಿಸಿದರು.ಶಾಲಾ ಮಕ್ಕಳಿಂದ ಇಲಾಖೆ ನಿಗದಿಪಡಿಸಿದ ಯೋಗಾಸನಗಳನ್ನು ಮಾಡಿಸಲಾಯಿತು. ಶಿಕ್ಷಕರಾದ ಶಿಲ್ಪರಾಣಿ, ಸೌಮ್ಯ, ಮಲ್ಲಿಕಾ, ಎಸ್‌ಡಿಎಂಸಿ ಸದಸ್ಯರಾದ ಚಂದ್ರಾವತಿ, ಅರ್ಚನಾ ಹಾಗೂ ಪೋಷಕರಾದ ಕಮಲ, ಗಣೇಶ್, ಕಾವ್ಯವಾಣಿ, ರಮೇಶ್ ಗೌಡ, ಶಿವಶನ್ಮಯಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here