ಪಾಂಬಾರು ಆರ್‌ಪಿ ಕಲಾ ಸೇವಾ ಟ್ರಸ್ಟ್‌ನಿಂದ ರಾಜ್ಯಮಟ್ಟದ ಗಾನಶಾರದೇ ಗಾಯನ ಸ್ಪರ್ಧೆ, ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ

0

ಪುತ್ತೂರು: ಆರ್‌ಪಿ ಕಲಾ ಸೇವಾ ಟ್ರಸ್ಟ್ ಪಾಂಬಾರು ಆಶ್ರಯದಲ್ಲಿ ರಾಜ್ಯಮಟ್ಟದ ಗಾನಶಾರದೇ ಗಾಯನ ಸ್ಪರ್ಧೆ ಸೀಸನ್-5 ಗ್ರ್ಯಾಂಡ್ ಫಿನಾಲೆ ಹಾಗೂ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ – 2026 ಕಾರ್ಯಕ್ರಮ ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎ.ಎಸ್. ವಿಜಯಕುಮಾರ್ ಸಭಾಭವನದಲ್ಲಿ ನಡೆಯಿತು.


ಆರ್‌ಪಿ ಕಲಾ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀಧರ್ ಎಕ್ಕಡ್ಕರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಸಂಜೀವ ಮಠಂದೂರು, ಕೆ.ಕೆ ಅಶೋಕ್ ಪ್ರಭು, ವಿಕ್ರಂ ಅಡ್ಪಂಗಾಯ. ಬಿ. ಚಂದ್ರ ಕಾವು ಬಂಗ್ಲಗುಡ್ಡೆ, ಸುರೇಶ್ ದೇವರಗುಂಡ, ಮಾಧವ ಬೆಳ್ಳಾರೆ, ನಾರಾಯಣ ರೈ ಕುಕ್ಕುವಳ್ಳಿ, ಸುಬ್ರಾಯ ಭಟ್ ನೀರ್ಕಜೆ ಹಾಗೂ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಮಂಡೆಕೋಲು ಉಪಸ್ಥಿತರಿದ್ದರು. ಜೂನಿಯರ್ ವಿಭಾಗ ಹಾಗೂ ಸೀನಿಯರ್ ವಿಭಾಗದ ಸಂಗೀತ ಗಾಯನೋತ್ಸವ ನಡೆಯಿತು. ರೋಹಿತ್ ಕುರಿಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಯಶುಭ ರೈ ಪ್ರಾರ್ಥಿಸಿದರು. ಕಾರ್ಯದರ್ಶಿ ವಿನಯ್ ಕುಮಾರ್ ಸ್ವಾಗತಿಸಿದರು.

ಸಮಾರೋಪ ಸಮಾರಂಭ
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಟಿ.ಎಂ. ಶಹೀದ್ ತೆಕ್ಕಿಲ್, ಸದಾನಂದ ಮಾವಜಿ, ಕೆ.ಎಂ ಮುಸ್ತಫ, ಡಾ. ಲೀಲಾಧರ್, ಅಂಗಾರ, ಸುರೇಶ್ ಕಣೆಮರಡ್ಕ, ಹೇಮನಾಥ್ ಶೆಟ್ಟಿ ಕಾವು, ಸುಬ್ರಾಯ ಕಲ್ಪಣೆ, ಶಿವಕುಮಾರ್ ಆರಾಧ್ಯ, ರಾಧಾಕೃಷ್ಣ ಬೊಳ್ಳೂರು, ಎಚ್.ಸಿ ಸದಾನಂದ ಬೆಂಗಳೂರು, ರವೀಂದ್ರ ಪ್ರಭು, ಸಂತೋಷ್ ಕುತ್ತಮುಟ್ಟೆ, ಪದ್ಮರಾಜ್ ಬಿ.ಸಿ. ಚಾರ್ವಕ, ಸಂತೋಷ್, ಠಾಣಾಧಿಕಾರಿ ಎಚ್. ಭೀಮರಾವ್ ವಾಷ್ಟರ್ ಬೆಂಗಳೂರು ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಆರ್‌ಪಿ ಕಲಾ ಸೇವಾ ಟ್ರಸ್ಟ್ ಸಂಚಾಲಕ ರವಿ ಪಾಂಬಾರು ಸ್ವಾಗತಿಸಿದರು.

ಫಲಿತಾಂಶ
ಗಾಯನ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಭವೀಶ್ ಮೆಸ್ತಾ, ದ್ವಿತೀಯ ಸ್ಥಾನ ಮನೀಶ್ ವಾಲಿ, ತೃತೀಯ ಸ್ಥಾನ ನಮಸ್ವಿ ಭಾಸ್ಕರ್ ಪುತ್ತೂರು ಆಯ್ಕೆಯಾದರು. ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಶಶಾಂಕ್ ವಿ ಹೊಳ್ಳ, ದ್ವಿತೀಯ ಸ್ಥಾನ ತುಷಾರ ಶಂಕರ ಉಡುಪಿ, ತೃತೀಯ ಸ್ಥಾನ ಶರಣ್ಯ ವಿ ಹೊಳ್ಳ ಆಯ್ಕೆಯಾದರು. ವಿಜೇತರಿಗೆ ಹಾಗೂ ಭಾಗವಹಿಸಿದ ಎಲ್ಲಾ ಗಾಯಕರಿಗೆ ಪ್ರಮಾಣ ಪತ್ರ ಹಾಗೂ ಗಾನ ಶಾರದೆ ಗಾಯನ ಸ್ಪರ್ಧೆ ಸೀಸನ್ 05 ಟ್ರೋಫಿ ನೀಡಿ ಗೌರವಿಸಲಾಯಿತು.

ರಾಜ್ಯಮಟ್ಟದ ಸಾಧಕರನ್ನು ಸನ್ಮಾನಿಸಲಾಯಿತು. ಪದಾಧಿಕಾರಿಗಳಾದ ಪವಿತ್ರ ಯಂ. ಬೆಳ್ಳಿಪ್ಪಾಡಿ, ನವ್ಯ ಅಮ್ಚಿನಡ್ಕ, ಹರೀಶ್ ಪಂಜಿಕಲ್ಲು, ಜಯದಿನೇಶ್ ಸವಣೂರು, ನವ್ಯ ಕೆ., ಮಮತಾ ಮಡಿಕೇರಿ ಸಮಗ್ರ ನಿರ್ವಹಣೆ ಮಾಡಿದರು.

LEAVE A REPLY

Please enter your comment!
Please enter your name here