ಶಿವಳ್ಳಿ ಸಂಪದ ಬೊಳುವಾರು ವಲಯದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ

0

ಪುತ್ತೂರು: ಶಿವಳ್ಳಿ ಸಂಪದ ಬೊಳುವಾರು ವಲಯ ಪುತ್ತೂರು ಇದರ 2026-2028ರ ಅವಧಿಯ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಮತ್ತು ಸದಸ್ಯರ ಪ್ರಥಮ ಸಭೆಯು ಆ.8ರಂದು ನೂತನ ಅಧ್ಯಕ್ಷ ಅನಂತಕೃಷ್ಣ ಪಡ್ಡಿಲ್ಲಾಯರ ಸ್ವಗೃಹ ಬನ್ನೂರು ಶ್ರೀ ದುರ್ಗಾ ನಿಲಯದಲ್ಲಿ ನಡೆಯಿತು.


ಪ್ರಸಿದ್ಧ ಜ್ಯೋತಿಷ್ಯ, ವಿದ್ವಾಂಸರೂ ಆದ ವೇ.ಮೂ.ವಿಶ್ವಮೂರ್ತಿ ಬಡೆಕ್ಕಿಲ್ಲಾಯ ಅವರು ಉಪನ್ಯಾಸ ನೀಡಿ, ತುಳುನಾಡಿನಲ್ಲಿ ಆಷಾಢ ಮಾಸ (ಆಟಿ)ದಲ್ಲಿ ನಡೆಯುವ ದುರ್ಗಾರಾಧನೆ, ಆಟಿ ಕೂಟಗಳು, ತುಳುನಾಡಿನ ಬೇರೆ ಬೇರೆ ರೀತಿಯ ಸಂಪ್ರದಾಯ ಆಚರಣೆಗಳ ಮಹತ್ವದ ಬಗ್ಗೆ ತಿಳಿಸಿದರು. ತಾಲೂಕು ಶಿವಳ್ಳಿ ಸಂಪದದ ಅಧ್ಯಕ್ಷರಾದ ಸತೀಶ ಮುಡಂಬಡಿತ್ತಾಯ ನೆಲ್ಯಾಡಿ, ಸಂಘಟನಾ ಕಾರ್ಯದರ್ಶಿ, ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ.ನೆಲ್ಯಾಡಿ, ನಿಕಟಪೂರ್ವ ಅಧ್ಯಕ್ಷ ಗಣೇಶ ಕೆದಿಲಾಯ, ಮಹಿಳಾಸಂಪದ ಅಧ್ಯಕ್ಷೆ ಅನ್ನಪೂರ್ಣ ಶ್ರೀಕೃಷ್ಣ ರಾವ್ ಶೇವಿರೆ, ನೂತನ ವಲಯಾಧ್ಯಕ್ಷ ಅನಂತಕೃಷ್ಣ ಪಡ್ಡಿಲ್ಲಾಯ ಉಪಸ್ಥಿತರಿದ್ದರು.
ನೂತನ ವಲಯಾಧ್ಯಕ್ಷರು ಅತಿಥಿಗಳಿಗೆ ಹೂ ನೀಡಿ ಶಾಲು ಹೊದಿಸಿ ಸ್ವಾಗತಿಸಿದರು.

ಅಭಿಜ್ಞಾ ರಾವ್ ದಾಳಿಂಬ ಪ್ರಾರ್ಥಿಸಿ, ಮಾಲತಿ ನಿಡ್ವಣ್ಣಾಯ ನೀತಿ ಸಂಹಿತೆ ಪಠಿಸಿದರು. ವಲಯ ಕಾರ್ಯದರ್ಶಿ ಹರಿಪ್ರಸಾದ್ ದಾಳಿಂಬ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಲೋಕ ಕಲ್ಯಾಣಾರ್ಥಕ್ಕಾಗಿ ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಾರಾಯಣದಿಂದ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ಬೊಳುವಾರು ವಲಯದ ಹಿರಿಯ ಪದಾಧಿಕಾರಿಗಳು ಮತ್ತು ಸದಸ್ಯರು, ದರ್ಬೆ, ನರಿಮೊಗರು, ನೆಲ್ಯಾಡಿ, ರಾಮಕುಂಜ ವಲಯಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here