ಡಾ.ಪ್ರಣವ್ ನಾಯಕ್ ಬಿ. ರವರಿಗೆ ಪಿ.ಎಚ್.ಡಿ.

0

ಪುತ್ತೂರು: ಮುಕ್ರಂಪಾಡಿ ನಿವಾಸಿ ಓರಿಯೆಂಟಲ್ ವಿಮಾ ಕಂಪನಿ ನಿವೃತ್ತ ಶಾಖಾ ವ್ಯವಸ್ಥಾಪಕ ವಸಂತ ನಾಯಕ್ ಬಿ. ಮತ್ತು ಗೀತಾ ನಾಯಕ್ ದಂಪತಿಯ ಪುತ್ರ ಡಾ.ಪ್ರಣವ್ ನಾಯಕ್ ಬಿ. ರವರು
ಪಿ.ಎಚ್.ಡಿ. ಪದವಿ ಪಡೆದಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿರುವ ಶ್ರೀ ಆದಿಚುಂಚನಗಿರಿ ಯುನಿವರ್ಸಿಟಿ ಡಾ.ಪ್ರಣವ್ ನಾಯಕ್ ಬಿ. ಅವರಿಗೆ Formulation and Evaluation of nanoemulsion in chronic restraint stress induced cognitive impairment(s) ಎಂಬ ವಿಷಯದಲ್ಲಿ ಡಾ. ಭಾರತಿ ಡಿ.ಆರ್ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಪ್ರಧಾನ ಮಾಡಿದೆ.

ಇವರು ಪ್ರಾಥಮಿಕ ಶಿಕ್ಷಣವನ್ನು ತೆಂಕಿಲ ವಿವೇಕಾನಂದ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ,ಪಿಯುಸಿ ಶಿಕ್ಷಣವನ್ನು ನೆಹರೂನಗರ ವಿವೇಕಾನಂದ ಕಾಲೇಜಿನಲ್ಲಿ,ಬಿಫಾರ್ಮ ಪದವಿಯನ್ನು ಪರಂಗಿಪೇಟೆಯ ವಲಚ್ಚಿಲ್ ನಲ್ಲಿರುವ ಶ್ರೀನಿವಾಸ ಕಾಲೇಜಿನಲ್ಲಿ ಪಡೆದಿದ್ದು ಎಂ.ಫಾರ್ಮ ಪದವಿಯನ್ನು ಬೆಂಗಳೂರಿನ ಅಲ್ ಅಮೀನ್ ಕಾಲೇಜ್ ಆಫ್ ಫಾರ್ಮಸಿ ಇಲ್ಲಿ ಪಡೆದಿರುತ್ತಾರೆ. ಇವರು ಪ್ರಸ್ತುತ ಬೆಂಗಳೂರಿನ ನಾಗಾವರದಲ್ಲಿರುವ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಇಂಡಿಜಿನ್ ಲಿಮಿಟೆಡ್ ಕಂಪೆನಿಯಲ್ಲಿ ಸೈಂಟಿಫಿಕ್ ರೈಟಿಂಗ್ ಲೀಡ್ ಆಗಿ ಕಾರ್ಯ ನಿರ್ವಹಿಸುತಿದ್ದಾರೆ.

LEAVE A REPLY

Please enter your comment!
Please enter your name here