ಆಲೆಟ್ಟಿ ಗ್ರಾಮದ ನೂಜಿನಮೂಲೆ ದಿ.ಬಟ್ಯ ನಾಯ್ಕರ ಪತ್ನಿ ಶ್ರೀಮತಿ ಕಮಲ ನಾಯ್ಕ್ ರವರು ವಯೋಸಹಜವಾಗಿ ಸ್ವಗೃಹದಲ್ಲಿ ಅ.10 ರಂದು ನಿಧನರಾದರು.
ಅವರಿಗೆ 95 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಜನಾರ್ದನ ನಾಯ್ಕ್ ನೂಜಿನಮೂಲೆ, ನಿವೃತ್ತ ಬಿ.ಎಸ್.ಎನ್.ಎಲ್.ಉದ್ಯೋಗಿ ಸಂಜೀವ ನಾಯ್ಕ್ ನೂಜಿನಮೂಲೆ, ಮಾಧವ ನಾಯ್ಕ್ ಹಾರ್ಕಜೆ, ಒರ್ವ ಪುತ್ರಿ ಅಜ್ಜಾವರ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಜಯಂತಿ ಜನಾರ್ದನ ನಾಯ್ಕ್ ಅಡ್ಪಂಗಾಯ ಮತ್ತು ಅಳಿಯ ಜನಾರ್ದನ ನಾಯ್ಕ್ ಹಾಗೂ ಸೊಸೆಯಂದಿರನ್ನು,ಮೊಮ್ಮಕ್ಕಳನ್ನು, ಮರಿ ಮೊಮ್ಮಕ್ಕಳನ್ನು ,ಕುಟುಂಬಸ್ಥರನ್ನು ಅಗಲಿದ್ದಾರೆ.