ಮೂರನೇ ಮಹಡಿಯಿಂದ ಬಿದ್ದು ತೀವ್ರ ಗಾಯಗೊಂಡ ಮೂರು ವರ್ಷದ ಮಗು

0

ಪುತ್ತೂರು: ಮೂರು ವರ್ಷದ ಹೆಣ್ಣು ಮಗುವೊಂದು 3ನೇ ಮಹಡಿಯಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡು ಮಂಗಳೂರು ಆಸ್ಪತ್ರೆ ದಾಖಲಾದ ಘಟನೆ ವರದಿಯಾಗಿದೆ. ಬಪ್ಪಳಿಗೆಯಲ್ಲಿರುವ ಬಾಡಿಗೆಯ ಫ್ಲಾಟ್‌ವೊಂದರ 3ನೇ ಮಹಡಿಯಲ್ಲಿ ವಾಸವಾಗಿರುವ ಅದ್ದು ಎಂಬವರ ಮನೆಗೆ ಕುಟುಂಬ ಸಮೇತರಾಗಿ ಬಂದಿದ್ದ ಅವರ ಸಹೋದರ ರಫೀಕ್ ಎಂಬವರ 3 ವರ್ಷದ ಹೆಣ್ಣು ಮಗು ೩ನೇ ಮಹಡಿಯಿಂದ ಕೆಳಗೆ ಬಿದ್ದು ತೀರ್ವ ಗಾಯಗೊಂಡು ಕಾಲು ಮುರಿತಕ್ಕೊಳಗಾಗಿದ್ದು ತಕ್ಷಣ ಮಗುವನ್ನು ಮಂಗಳೂರಿನ ಕೆ,ಎಸ್ ಹೆಗ್ಡೆ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here