ವಿದ್ಯಾಮಾತಾದಿಂದ ತರಬೇತಿ: ಕ್ಯಾಂಪ್ಕೋ ಸಂಸ್ಥೆ ಏರ್ಪಡಿಸಿದ್ದ ಜೂ.ಅ.ಎ. ಪರೀಕ್ಷೆ- ಅಕಾಡೆಮಿಯ 6 ಆಭ್ಯರ್ಥಿಗಳೂ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣ

0

ಪುತ್ತೂರು: ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ವಿದ್ಯಾಮಾತಾ ಅಕಾಡೆಮಿಯಲ್ಲಿ ಹೆಸರಾಂತ ಕ್ಯಾಂಪ್ಕೋ ಸಂಸ್ಥೆ ಇದರ ಜೂನಿಯರ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಹುದ್ದೆಗೆ ತರಬೇತಿ ಪಡೆದುಕೊಂಡ 6 ಅಭ್ಯರ್ಥಿಗಳೂ ಕೂಡ ಉತ್ತೀರ್ಣರಾಗುವ ಮೂಲಕ ಅಕಾಡೆಮಿಗೆ ನೂರು ಶೇಕಡಾ ಫಲಿತಾಂಶವನ್ನು ತಂದುಕೊಡುವ ಮೂಲಕ ವಿದ್ಯಾಮಾತಾದ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದ್ದಾರೆ.

ಈ 6 ವಿದ್ಯಾರ್ಥಿಗಳು ಕೂಡ ಶ್ರಮಪಟ್ಟು ಮಾಡಿರುವ ಅತ್ಯುತ್ತಮ ಸಾಧನೆಗೆ ಸಂಸ್ಥೆಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಅತೀವ ಸಂತಸ ವ್ಯಕ್ತಪಡಿಸಿದ್ದು, ಸ್ಥಳೀಯ ಮಟ್ಟದ ನೇಮಕಾತಿಯಲ್ಲೂ ನಮ್ಮ ವಿದ್ಯಾರ್ಥಿಗಳ ಸಾಧನೆ ಇನ್ನಷ್ಟೂ ಸರಕಾರಿ ಉದ್ಯೋಗದ ಆಕಾಂಕ್ಷಿಗಳಿಗೆ ಮತ್ತಷ್ಟೂ ಸ್ಫೂರ್ತಿ ತುಂಬಿಕೊಡಲಿದೆ ಎಂದರಲ್ಲದೇ, ಈ ಮೊದಲೂ ಕೂಡ ಅಕಾಡೆಮಿಯ ಮೂಲಕ 125ಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ಇಲಾಖೆ ಗಳಿಗೆ ಆಯ್ಕೆಗೊಂಡಿರುವುದನ್ನೂ ಕೂಡ ಸ್ಮರಿಸಿಕೊಂಡರು.
ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಲ್ಲಿ ಬೆದ್ರಾಳ ನಿವಾಸಿ ವಿಜಯ ನಾಯ್ಕರವರ ಇಬ್ಬರು ಪುತ್ರರಾದ ವಿವೇಕ್ ಎಸ್ ಮತ್ತು ವಿಶಾಲ್ ಎಸ್, ಕುಂದಾಪುರ ತಾಲೂಕಿನ ಹಾಲ್ನಾಡು ಗ್ರಾಮದ ಶೇಖರ ಶೆಟ್ಟಿ ಪುತ್ರಿ ಶಾಲಿನಿ ಎಚ್, ಶಿವಮೊಗ್ಗ ಜಿಲ್ಲೆಯ ವಿನೋಬಾನಗರ ರತ್ನಾಕರ.ಎನ್. ಇವರ ಪುತ್ರ ಆದಿತ್ಯ .ಆರ್. ಎನ್, ಪರ್ಲಡ್ಕ ನಿವಾಸಿ ಸುರೇಶ್ ನಾಯ್ಕರ ಪುತ್ರಿ ಪೂಜಾ. ಎಸ್. ನಾಯ್ಕ ಮತ್ತು ಕಡಬ ತಾಲೂಕಿನ ಯೇನೆಕಲ್ಲು ಗ್ರಾಮದ ಉಜಿರ್ ಕೋಡಿ ನಿವಾಸಿ ಸುಮಲತಾ ಇವರೆಲ್ಲರೂ ವಿದ್ಯಾಮಾತಾ ಅಕಾಡೆಮಿಯಿಂದ ಪಡೆದಿರುವ ತರಬೇತಿಯ ಫಲವಾಗಿ 2024 ನೇ ಸಾಲಿನ ಕ್ಯಾಂಪ್ಕೋ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಂಸ್ಥೆಯ ಹಿರಿಮೆಯನ್ನು ಉನ್ನತ ಮಟ್ಟಕ್ಕೆ ಏರಿಸಿರುವುದು ಪ್ರಶಂಸಾರ್ಹ ಎಂದು ಹೇಳಿ ಶುಭ ಹಾರೈಸಿದ್ದಾರೆ.
ಆಡಳಿತ ಮಂಡಳಿ ಮತ್ತು ತರಬೇತಿ ತಂಡ ಹಾಗೂ ಸಿಬ್ಬಂದಿ ವರ್ಗವೂ ಕೂಡ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದೆ.

LEAVE A REPLY

Please enter your comment!
Please enter your name here