ಕಾರ್ಜಾಲು ಶ್ರೀ ಧೂಮಾವತಿ ದೈವದ ವಾರ್ಷಿಕ ದೊಂಪದ ಬಲಿ ಜಾತ್ರೋತ್ಸವ

0

ಪುತ್ತೂರು: ಕಲ್ಲೇಗ ಶ್ರೀ ಕಲ್ಕುಡ ಮತ್ತು ಕಲ್ಲುರ್ಟಿ ದೈವಗಳ ಮೂಲ ಸ್ಥಾನ ಕಬಕ ಗ್ರಾಮದ ಕಾರ್ಜಾಲುವಿನಲ್ಲಿ ಮಾ.19ರಂದು ಕಾರ್ಜಾಲು ಶ್ರೀ ಧೂಮಾವತಿ ದೈವದ ವಾರ್ಷಿಕ ದೊಂಪದ ಬಲಿ ಜಾತ್ರೋತ್ಸವ ವೈಭವದಿಂದ ನಡೆಯಿತು.



ರಾತ್ರಿ ಕರ್ಜಾಲು ಗುತ್ತಿನಿಂದ ಧೂಮಾವತಿ, ಕಲ್ಕುಡ ಮತ್ತು ಕಲ್ಲುರ್ಟಿ ದೈವಗಳ ಭಂಡಾರ ಹೊರಟು, ಗೋಂದಲ ಪೂಜೆಯಾಗಿ ದೈವಗಳ ದೊಂಪದ ಬಲಿ ನೇಮೋತ್ಸವ ನಡೆಯಿತು. ಇದಕ್ಕೂ ಮೊದಲು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಹೆಗ್ಡೆಯವರ ನಿರ್ದೇಶನದಲ್ಲಿ ಪುನೀತ್ ಆರ್ಕೆಸ್ಟಾç ಪುತ್ತೂರು ಮತ್ತು ಸ್ವಾಮಿ ಮೆಲೋಡಿಸ್ ಪುತ್ತೂರು ಇವರಿಂದ ‘ತುಳುವ ಐಸಿರಿ’ ಗಾನ ನಾಟ್ಯ ಸಂಗಮ ನಡೆಯಿತು.

LEAVE A REPLY

Please enter your comment!
Please enter your name here