ಸವಣೂರು ಸೀತಾರಾಮ ರೈಯವರ ಜನ್ಮದಿನದ ಅಮೃತ ಮಹೋತ್ಸವದ ಕೊಡುಗೆ

0
  • ಸವಣೂರಿನಲ್ಲಿ 5 ಲಕ್ಷ ರೂ, ವೆಚ್ಚದಲ್ಲಿ ಸ್ನಾನಗೃಹ, ಶೌಚಾಲಯ ನಿರ್ಮಾಣಕ್ಕೆ ಶಂಕು ಸ್ಥಾಪನೆ

 

ಪುತ್ತೂರು: ಸಹಕಾರ ರತ್ನ ಸವಣೂರು ಕೆ. ಸೀತಾರಾಮ ರೈಯವರ 75 ನೇ ಹುಟ್ಟು ಹಬ್ಬ ಜೂ. 9ರಂದು ನಡೆಯಲಿದ್ದು, ಇದರ ಕೊಡುಗೆಯಾಗಿ ಸವಣೂರಿನಲ್ಲಿ ಸುಮಾರು ೫ ಲಕ್ಷ ರೂ, ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸುಸಜ್ಜಿತವಾದ ಸ್ನಾನಗೃಹ, ಶೌಚಾಲಯದ ಶಂಕು ಸ್ಥಾಪನೆ ಮಾ. 28 ರಂದು ಜರಗಿತು.

ಸವಣೂರು ಗ್ರಾ.ಪಂ, ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಕೆಡೆಂಜಿರವರು ಶಂಕು ಸ್ಥಾಪನೆ ಕಾರ್‍ಯಕ್ರಮವನ್ನು ನೇರವೇರಿಸಿದರು. ಕಾರ್‍ಯಕ್ರ,ಮದ ಅಧ್ಯಕ್ಷತೆಯನ್ನು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಎನ್.ಸುಂದರ ರೈ ಸವಣೂರು, ಜಿಲ್ಲಾ ಯುವ ಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸವಣೂರು ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅರ್ತಿಕರೆ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಬೆಳ್ಳಾರೆ ಪೋಲೀಸ್ ಠಾಣೆಯ ಎಸ್.ಐ, ಅಂಜನೇಯ ರೆಡ್ಡಿ, ಸವಣೂರು ಗ್ರಾ.ಪಂ, ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಪಿಡಿಓ ನಾರಾಯಣ ಬಟ್ಟೋಡಿ, ಲೆಕ್ಕಸಹಾಯಕ ಮನ್ಮಥ, ಸದಸ್ಯರುಗಳಾದ ಗಿರಿಶಂಕರ್ ಸುಲಾಯ ದೇವಶ್ಯ, ತೀರ್ಥರಾಮ ಕೆಡೆಂಜಿ, ಚಂದ್ರಾವತಿ ಸುಣ್ಣಾಜೆ, ಬಾಬು ಜರಿನಾರು, ಅಬ್ದುಲ್ ರಜಾಕ್ ಕೆನರಾ, ಎಂ.ಎ, ರಫೀಕ್ ಮಂತೂರು, ಚೆನ್ನು, ಮಾಜಿ ಸದಸ್ಯ ಸತೀಶ್ ಬಲ್ಯಾಯ ಕನಡಕುಮೇರು, ಸಿಬ್ಬಂದಿ ಯತೀಶ್ ಕುಮಾರ್, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಪಿ.ಡಿ.ಕೃಷ್ಣಕುಮಾರ್ ರೈ ದೇವಶ್ಯ, ಸವಣೂರು ಬೆನಸ ರಬ್ಬರ್ ಸೊಸೈಟಿಯ ಅಧ್ಯಕ್ಷ ಕೆಡೆಂಜಿಗುತ್ತು ಪ್ರವೀಣ್ ಕುಮಾರ್, ಕಾರ್‍ಯದರ್ಶಿ ಅಚ್ಚುತ ಸವಣೂರು, ಸವಣೂರು ಸಿ.ಎ, ಬ್ಯಾಂಕ್ ನಿರ್ದೇಶಕ ಮಹಾಬಲ ಶೆಟ್ಟಿ ಕೊಮ್ಮಂಡ, ಚೇತನ್ ಕುಮಾರ್ ಕೋಡಿಬೈಲು, ಮುಖ್ಯಕಾರ್‍ಯನಿರ್ವಣಾಧಿಕಾರಿ ಚಂದ್ರಶೇಖರ್ ಪಿ, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮಿ ಎಸ್. ರೈ, ಉಪಪ್ರಾಂಶುಪಾಲ ಶೇಷಗಿರಿ, ಸವಣೂರು ಸಿ.ಎ, ಬ್ಯಾಂಕಿನ ನಿವೃತ್ತ ಉಪಕಾರ್‍ಯನಿರ್ವಹಣಾಧಿಕಾರಿ ಕುಸುಮಾ ಪಿ.ಶೆಟ್ಟಿ ಕೆರೆಕೋಡಿ, ಪ್ರಭಾಕರ್ ಶೆಟ್ಟಿ ನಡುಬೈಲು, ಜಯರಾಮ ರೈ ಮೂಡಂಬೈಲು ಕನಡಕುಮೇರು, ದಯಾನಂದ ಭಂಡಾರಿ ಸವಣೂರು, ರಾಮಕೃಷ್ಣ ಪ್ರಭು ಸವಣೂರು,, ವಿಠಲ ರೈ ನಡುಮನೆ, ವಿ,ವಿ. ನಾರಾಯಣ ಭಟ್ ನರಿಮೊಗರು, ವಿಠಲ ಶೆಟ್ಟಿ ಬಂಬಿಲ, ಗೋಪಾಲಕೃಷ್ಣ ರೈ ಸವಣೂರು ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು.

3 ಕೋಟಿ ರೂ, ವೆಚ್ಚದಲ್ಲಿ ಆದರ್ಶ ಸಹಕಾರ ಸಂಘದ ಪ್ರಧಾನ ಕಚೇರಿ ಕಟ್ಟಡ
ಸವಣೂರಿನ ಮೂಲಭೂತ ಅವಶ್ಯಕತೆಗಳಲ್ಲಿ ಸಾರ್ವಜನಿಕರಿಗೆ ಅಗತ್ಯವಾಗಿ ಬೇಕಾದ ಸ್ನಾನ ಗೃಹ ಮತ್ತು ಶೌಚಾಲಯವನ್ನು ಸುಮಾರು ೫ ಲಕ್ಷ ರೂ, ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಿ ಕೊಡಲಿದ್ದೇವೆ, ಇದರ ಲೋಕರ್ಪಣೆಯು ನನ್ನ ಹುಟ್ಟು ಹಬ್ಬದ ದಿನ( ಜೂನ್ ೯) ನಡೆಯಲಿದೆ. ಊರ-ಪರವೂರ ಸಾರ್ವಜನಿಕರ ಇದರ ಬಳಕೆಯನ್ನು ಮಾಡಬಹುದು. ಸವಣೂರಿನ ಸಮಗ್ರ ಅಭಿವೃದ್ಧಿಯೇ ನನ್ನ ಧ್ಯೇಯವಾಗಿದ್ದು, ಜಿಲ್ಲಾ ಮಟ್ಟದ ಸಹಕಾರ ಸಂಸ್ಥೆಯಾಗಿರುವ ಆದರ್ಶ ವಿವಿಧ್ದೋಶ ಸಹಕಾರ ಸಂಘದ ಪ್ರಧಾನ ಕಚೇರಿಯ ಕಟ್ಟಡವನ್ನು ೩ ಕೋಟಿ ರೂ, ವೆಚ್ಚದಲ್ಲಿ ಸವಣೂರಿನಲ್ಲಿ ಪ್ರಾರಂಭಿಸವ ನಿಟ್ಟಿನಲ್ಲಿ ಜೂ. ೯ ರಂದು ಇದರ ನೂತನ ಕಟ್ಟಡಕ್ಕೆ ಶಿಲಾನ್ಯಾಸವನ್ನು ಮಾಡುವ ಯೋಜನೆ ಇದೆ. ಸುಸಜಿತವಾದ ಈ ಕಟ್ಟಡದಲ್ಲಿ ಸಾರ್ವಜನಿಕ ಸಮಾರಂಭಕ್ಕೆ ಬೇಕಾದ ೧೫೦೦ ಮಂದಿ ಕುಳಿತುಕೊಳ್ಳುವ ಸುಂದರವಾದ ಸಭಾ ಭವನವನ್ನು ನಿರ್ಮಾಣವನ್ನು ಮಾಡಲಾಗುವುದು.ಸವಣೂರು ಕೆ.ಸೀತಾರಾಮ ರೈ ಸಂಚಾಲಕರು- ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ಸವಣೂರು

LEAVE A REPLY

Please enter your comment!
Please enter your name here