ನಿಡ್ಪಳ್ಳಿ; ಸರಕಾರಿ ಪ್ರೌಢಶಾಲೆ ಬೆಟ್ಟಂಪಾಡಿ ಇಲ್ಲಿ 2022-23 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಮೆ.16 ರಂದು ನಡೆಯಿತು. ಕೊರೊನಾ ಸಮಯದಲ್ಲಿ ನಷ್ಟವಾದ ಶೈಕ್ಷಣಿಕ ಸಮಯವನ್ನು ಭರಿಸುವ ಸಲುವಾಗಿ ಸರಕಾರ ಈ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಎಂದು ಮೆ.16 ರಂದು ಅರಂಬಿಸಲು ಆದೇಶ ನೀಡಿದ ಹಿನ್ನೆಲೆಯಲ್ಲಿ ಶಾಲೆಯನ್ನು ತೋರಣಗಳಿಂದ ಅಲಂಕರಿಸಿ ಪ್ರಾರಂಭೋತ್ಸವ ನಡೆಯಿತು.
ನಂತರ ನಡೆದ ಸಭಾ ಕಾರ್ಯಕ್ರಮವನ್ನು ಶಾಲಾಭಿವೃದ್ದಿ ಕಾರ್ಯಾಧ್ಯಕ್ಷ ಸುಂದರ ನಾಯಕ್ ಬಾಳೆಗುಳಿ ದೀಪ ಬೆಳಗಿಸಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಗುರು ಸೌಮ್ಯಲಕ್ಷ್ಮೀ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ ಮಕ್ಕಳು ಶಾಲೆಯ ಶೈಕ್ಷಣಿಕ ನಿಯಮಗಳ ಬಗ್ಗೆ ವಿವರಿಸಿದರು. ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ದಾನಿ ರಾಧಾಕೃಷ್ಣ ರೈ ಪಟ್ಟೆ, ಗಂಗಾಧರ ಸಿ.ಎಚ್, ಶಶಿಕಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿ, ಸಹ ಶಿಕ್ಷಕಿ ಮರೀನಾ ಶಾಂತಿ ವೇಗಸ್ ಸ್ವಾಗತಿಸಿದರು. ಸಹ ಶಿಕ್ಷಕಿ ಭಾರತಿ ವಂದಿಸಿ ಉಮಾ ಕಾರ್ಯಕ್ರಮ ನಿರೂಪಿಸಿದರು. ಸಂಗೀತ ಶಿಕ್ಷಕಿ ಶುಭಾ ರಾವ್, ಅತಿಥಿ ಶಿಕ್ಷಕಿ ವಿನುತಾ ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಂಡರು.