ಬೆಲೆ ಏರಿಕೆ ಅನಿವಾರ್ಯವಾದದ್ದಲ್ಲ ಸರಕಾರ ಪ್ರಾಯೋಜಿತ ಕೃತಕ ಸೃಷ್ಟಿ-ಪುತ್ತೂರಿನಲ್ಲಿ ಎಡ ಪಂಥೀಯ ಪಕ್ಷಗಳ ಕರೆಗೆ ರೈತ, ಕಾರ್ಮಿಕ ಸಂಘಟನೆಯ ಪ್ರತಿಭಟನೆಯಲ್ಲಿ ಬಿ.ಎಮ್.ಭಟ್

0

ಪುತ್ತೂರು: ಕಳೆದ ಏಳು ವರ್ಷಗಳ ಬಿಜೆಪಿ ಆಡಳಿತದ ಮಹಾನ್ ಕೊಡುಗೆಯಾದ ಬೆಲೆ ಏರಿಕೆಯ ಬಿಸಿಯಿಂದ ಭಾರತದ ಜನತೆ ತತ್ತರಿಸುವಂತಾಗಿದೆ, ಬಿಜೆಪಿ ಜನಪರ ಕಾಳಜಿ ಇಲ್ಲದ ಪಕ್ಷವೆಂದು ಸಾಬೀತು ಮಾಡಿದೆ. ಈ ಬೆಲೆ ಏರಿಕೆ ಅನಿವಾರ್ಯವಾದುದ್ದಲ್ಲ. ಸರಕಾರ ಪ್ರಯೋಜಿತ ಕೃತಕ ಸೃಷ್ಟಿ ಎಂದು ಕಾರ್ಮಿಕ ಸಂಘಟನೆಯ ಮುಖಂಡ ನ್ಯಾಯವಾದಿ ಬಿ.ಎಮ್ ಭಟ್ ಅವರು ಹೇಳಿದ್ದಾರೆ.

 


ಎಡ ಪಂಥೀಯ ಪಕ್ಷಗಳ ಕೇಂದ್ರ ಸಮಿತಿಯ ಕರೆಯಂತೆ ರೈತ, ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಬೆಲೆ ಏರಿಕೆ ಮತ್ತು ನಿರುದ್ಯೋಗದ ವಿರುದ್ಧ ನಡೆಸಿದ ವಾಹನ ಜಾಥಾದ 2 ದಿನ ಪುತ್ತೂರು ದರ್ಬೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಲೂಟಿಕೋರರ ಜೊತೆ ಬಿಜೆಪಿ ಮಾಡಿಕೊಂಡ ದುಷ್ಟ ಒಪ್ಪಂದವೇ ಇವತ್ತು ಬೆಲೆ ಏರಿಕೆಗೆ ಕಾರಣವಾಗಿದೆ ಎಂದ ಅವರು   ಕೈಗಾರಿಕೆಗಳ ನಾಶ, ಖಾಸಗಿಕರಣ ಮಾಡುವ ಸರಕಾರದ ಧೋರಣೆಯಿಂದ ಜನರಿಗೆ ನಿರುದ್ಯೋಗದ ಕೊಡುಗೆ ನೀಡಿ ಆದಾಯವು ಇಲ್ಲದೆಂತೆ ಮಾಡಲಾಗಿದೆ. ನಿರುದ್ಯೋಗದಿಂದ ಆದಾಯ ಕುಸಿತದಿಂದ ಕಂಗಾಲದ ಜನರಿಗೆ ಸುಳ್ಳುಗಳ ಸಮರ್ಥನೆ ನೀಡಿ ನಂಬಿಸಲಾಗಿದೆ. ತನ್ನ ದುಷ್ಟ ನೀತಿಗಳನ್ನು ಮರೆಮಾಚಲು ಮುಸ್ಲಿಂರನ್ನು ಕೃತಕ ಶತ್ರುಗಳನ್ನಾಗಿಸಿ ಹಿಂದು ರಕ್ಷಣೆಯ ನಾಟಕ ಆಡುತ್ತಿದೆ. ಬಿಜೆಪಿಯ ದುಷ್ಟ ನೀತಿ ಅರ್ಥ ಮಾಡಿಕಕೊಳ್ಳದಿದ್ದರೆ ಹಿಂದುಗಳು ಮಾತ್ರವಲ್ಲ ಭಾರತೀಯರೆಲ್ಲರೂ ನಾಶದತ್ತ ಸಾಗಿ ಭಾರತದ ಭವಿಷ್ಯವೇ ನಾಶವಾಗಲಿದೆ. ಹಿಂದು ಧರ್ಮದ ಎಂಬ ಶಬ್ದ ಕೇವಲ ರಕ್ಷಣೆ ಮಾಡುವುದಲ್ಲ. ಜನರ ರಕ್ಷಣೆ ಮಾಡಿದಾಗಲೇ ಆ ಜನರ ಧರ್ಮದ ರಕ್ಷಣೆ ಸಾಧ್ಯ ಎಂಬ ಕನಿಷ್ಠ ಜ್ಞಾನ ಇಲ್ಲದವರು ಬಿಜೆಪಿಯವರು ಎಂದರು. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ಅಧಿಕಾರಕ್ಕೆ ಬಂದ ಬಿಜೆಪಿ ಇಂದ ವಿಪರೀತ ಭ್ರಷ್ಟಾಚಾರದಲ್ಲಿ ಮುಳುಗಿ ಶೇ.40 ಕಮೀಶನ್ ದಂಧೆ ನಡೆಸುತ್ತಾ ಸರಕಾರದ ಹಣವನ್ನು ಲೂಟಿ ಮಾಡುತ್ತಿದೆ ಎಂದು ಟೀಕಿಸಿದರು. ನ್ಯಾಯವಾದಿ ಪಿ.ಕೆ.ಸತೀಶನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾಗೃತಿ ಸಭೆಯ ಆರಂಭದಲ್ಲಿ ಕೊರವಂಜಿ ಹಾಡುಗಳ ಮೂಲಕ ಬೆಲೆ ಏರಿಕೆ ಭ್ರಷ್ಟಾಚಾರ, ನಿರುದ್ಯೋಗವನ್ನು ಜನರಿಗೆ ಮನದಟ್ಟು ಮಾಡುವ ತಿಳುವಳಿಕೆ ಹಾಡನ್ನು ಹಾಡಲಾಯಿತು. ಸಭೆಯಲ್ಲಿ ನೆಬಿಸಾ, ಧನಂಜಯ ಗೌಡ, ರಾಮಚಂದ್ರ, ದಿನೇಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಜಯಶ್ರೀ ವಂದಿಸಿದರು.

ಜನರ ಲೂಟಿ ಮಾಡುತ್ತಿರುವ ಸರಕಾರ
ರಿಲಯನ್ಸ್ ಕಂಪೆನಿಗೆ ಗ್ಯಾಸ್ ತಯಾರಿಕೆಯಿಂದ ವಿಪರೀತ ಲಾಭ ಬರುವಂತೆ ಒಪ್ಪಂದ ಮಾಡಿಕೊಂಡ ಸರಕಾರ ಯುನಿಟ್‌ಗೆ 8.4 ಡಾಲರ್ ದರದಲ್ಲಿ ಮಾರಾಟ ಮಾಡಿದರೂ ಕೇಳುವ ಹಾಕಿಲ್ಲ. ಸರಕಾರಿ ಸಂಸ್ಥೆ ಓಎನ್‌ಜಿಸಿ ತಯಾರಿಸಿದ ಗ್ಯಾಸ್ ಅನ್ನು ಯುನಿಟ್‌ಗೆ ಕೇವಲ ರೂ. 2 ಡಾಲರಲ್ಲಿ ನೀಡುತ್ತಿದೆ. ನಿಜವಾದ ಬೆಲೆಯಲ್ಲೇ ಗ್ಯಾಸ್ ನೀಡಿದರೆ ಹಿಂದಿನಂತೆ ಸಿಲಿಂಡರ್ ಒಂದರ ದರ ರೂ. 350ಕ್ಕೆ ಇಳಿಸಬಹುದು. ಆದರೆ ವಿತರಣಾ ಕಂಪೆನಿಗಳು ಇವೆರಡನ್ನೂ ಪಡೆದು ರಿಲಯನ್ಸ್ ದರದಲ್ಲಿ ಮಾರಾಟ ಮಾಡುತ್ತಿದೆ.ಬಿ.ಎಮ್ ಭಟ್ ಕಾರ್ಮಿಕ ಸಂಘಟನೆಯ ನಾಯಕ

LEAVE A REPLY

Please enter your comment!
Please enter your name here