ಹೆಡಗೇವಾರ್ ಭಾಷಣವನ್ನು ಪಠ್ಯ ಪುಸ್ತಕದಿಂದ ಹಿಂಪಡೆಯುವಂತೆ ಆಗ್ರಹಿಸಿ ಸಿಎಫ್‌ಐ ಪ್ರತಿಭಟನೆ

0

 

ಪುತ್ತೂರು:ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಕೇಶವ್ ಬಲರಾಮ್ ಹೆಡಗೇವಾರ್ ಅವರ ಭಾಷಣವನ್ನು 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಹತ್ತನೇ ತರಗತಿ ಕನ್ನಡ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಿದ್ದು,ಇದು ಶಿಕ್ಷಣದ ಕೇಸರೀಕರಣದ ಮುಂದುವರೆದ ಭಾಗವಾಗಿದ್ದು ಇದನ್ನು ಶೀಘ್ರ ಹಿಂಪಡೆಯಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ಸಮಿತಿ ಮುಖಂಡ ರಿಯಾರh ಅಂಕತ್ತಡ್ಕ ಆಗ್ರಹಿಸಿದ್ದಾರೆ.

 


ಹೆಡಗೇವಾರ್‌ರವರ ಭಾಷಣವನ್ನು ಪಠ್ಯ ಪುಸ್ತಕದಿಂದ ಹಿಂಪಡೆಯುವಂತೆ ಆಗ್ರಹಿಸಿ ಸಿಎಫ್‌ಐ ಮೇ 26ರಂದು ಕಿಲ್ಲೆ ಮೈದಾನದ ಅಮರ್ ಜವಾನ್ ಸ್ಮಾರಕದ ಬಳಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ವಿದ್ಯಾರ್ಥಿಗಳಲ್ಲಿ, ಸಮಾಜದಲ್ಲಿ ಸಾಮರಸ್ಯ, ಐಕ್ಯತೆ ಬಯಸುವಲ್ಲಿ ಆರ್‌ಎಸ್‌ಎಸ್‌ನ ಸಂಸ್ಥಾಪಕ ಹೆಡಗೇವಾರ್ ಮಾದರಿಯಾಗಲು ಸಾಧ್ಯವಿಲ್ಲ ಎಂದ ಅವರು, ಹೆಡಗೇವಾರ್ ಮಾದರಿಯಾಗಿರುವುದು ಆರ್‌ಎಸ್‌ಎಸ್‌ನವರಿಗೆ ಮಾತ್ರ ಹಾಗಾಗಿ ಅವರ ಭಾಷಣವನ್ನು ಪಠ್ಯದಿಂದ ಹಿಂಪಡೆಯಬೇಕೆಂದು ಆಗ್ರಹಿಸಿದರು.ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ದ.ಕ ಜಿಲ್ಲಾ ಸಮಿತಿ ಅಧ್ಯಕ್ಷ ಆರಿಫ್ ಬೆಟ್ಟಂಪಾಡಿ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಕಾರ್ಯದರ್ಶಿ ಫಾರೂಕ್ ಕಟ್ಟತ್ತಾರು, ಜಿಲ್ಲಾ ಸಮಿತಿ ಸದಸ್ಯರಾದ ರಾಯಿರh ಕಲ್ಲರ್ಪೆ, ಮುಸ್ತಾಫ ಕೊಡಿಪ್ಪಾಡಿ, ಶಬೀರ್ ಕಲ್ಲರ್ಪೆ ಸೇರಿದಂತೆ ಹಲವಾರು ಮಂದಿ ಸಿಎಫ್‌ಐ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here