ಡಿಕೆ ಕೆಎ ಸಿಎಸ್ ಸಿ ವಿಎಲ್ಇ ಸೊಸೈಟಿಯ ಮಹಾ ಸಭೆ

0
  • ಅಧ್ಯಕ್ಷರಾಗಿ ರೋಹಿತ್ ಕುಮಾರ್ ಕುತ್ತಾರ್ ಪದವು, ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು 2ನೇ ಅವಧಿಗೆ ಪುನರಾಯ್ಕೆ, ಕೋಶಾಧಿಕಾರಿಯಾಗಿ ನವೀನ ಎಂ ಮೇದಿನಿ

ಪುತ್ತೂರು: ಡಿಕೆ ಕೆಎ ಸಿಎಸ್ ಸಿ ವಿಎಲ್ಇ ಸೊಸೈಟಿಯ ಜಿಲ್ಲಾ ಸಮಿತಿ ಮಹಾಸಭೆಯು ಜೂನ್ 4ರಂದು ಮೇಲ್ಕಾರ್ ಬಿರ್ವ ಹೋಟೆಲ್ ಸಭಾಂಗಣದಲ್ಲಿ ಅಧ್ಯಕ್ಷರಾದ ರೋಹಿತ್ ಕುಮಾರ್ ಕುತ್ತಾರ್ ಪದವು ರವರ ಅಧ್ಯಕ್ಷತೆಯಲ್ಲಿ ಜರಗಿತು. ಮುಂದಿನ ಅವಧಿಗೆ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ರೋಹಿತ್ ಕುಮಾರ್ ಕುತ್ತಾರಪದವು, ಪ್ರಧಾನ ಕಾರ್ಯದರ್ಶಿಯಾಗಿ ಡಾ.ಹಾಜಿ.ಯಸ್ ಅಬೂಬಕ್ಕರ್ ಆರ್ಲಪದವು ಮತ್ತು ಕಾರ್ಯಾಧ್ಯಕ್ಷರಾಗಿ ಹೇಮಚಂದ್ರ ಬಜ್ಪೆ 2ನೇ ಅವಧಿಗೆ ಪುನರಾಯ್ಕೆಗೊಂಡರು.

 ಕೋಶಾಧಿಕಾರಿಯಾಗಿ ನವೀನ ಎಂ ಮೇದಿನಿ, ಉಪಾಧ್ಯಕ್ಷರುಗಳಾಗಿ ಚಂದ್ರಶೇಖರ ಹೆಬ್ಬಾರ ಕೊಲ್ಯ ಮಂಗಳೂರು, ಗ್ರೆಗ್ ಮೆಲ್ಸ್ಟರ್ ಫೆರಾವೋ ಬೆಳ್ತಂಗಡಿ, ಶಿವಾನಂದ ರೈ ಬಂಟ್ವಾಳ, ವಿಶ್ವಾಸ್ ಎಂ ಸುಳ್ಯ, ಕೃಷ್ಣ ಪ್ರಶಾಂತ ಕೆ ಪುತ್ತೂರು,ರಘುಲಾಲ್ ನೆಲ್ಯಾಡಿ ಕಡಬ, ಜತೆಕಾರ್ಯದರ್ಶಿಗಳಾಗಿ ಸಂಜಾತ ವೀರಕಂಬ ಬಂಟ್ವಾಳ ಮತ್ತು ಚಂದ್ರಾವತಿ ಗಂಜಿಮಠ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಗೌತಮ್ ಕುಕ್ಯಾನ್ ಕೆ ವಿ ಉಪ್ಪಿನಂಗಡಿ, ನವೀನ್ ಕುಮಾರ್ ಸುಳ್ಯ, ಹೈದರಾಲಿ ಬೆಳ್ತಂಗಡಿ, ಪ್ರಸನ್ನ ಮಲ್ಯ ಮಂಗಳೂರು, ಶಿವಕುಮಾರ ಸುದ್ದಿ ಪುತ್ತೂರು, ಸುನೀಲ್ ಕುಮಾರ್ ಮಂಗಳೂರು, ಮುಹಮ್ಮದ್ ಆಸಿಫ್ ಮಂಗಳೂರು, ಶಿವಪ್ಪ ನಾಯ್ಕ ಅಡ್ಯನಡ್ಕ, ಶೈಲಜಾ ಬಂಟ್ವಾಳ ಮತ್ತು ಅಂಶಿತಾ ನಾಯಕ್ ಪುತ್ತೂರು ಇವರುಗಳು ಸರ್ವಾನುಮತದಿಂದ ಆಯ್ಕೆಯಾದರು.

ಸಭೆಯಲ್ಲಿ ಸೊಸೈಟಿಯ ಕೋಶಾಧಿಕಾರಿಯಾಗಿದ್ದ ಪೂರ್ಣಿಮಾ ಹಳೆಯಂಗಡಿ, ಹಳೆಯಂಗಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಗ್ಗೆ ಮತ್ತು ಉಪಾಧ್ಯಕ್ಷರಾಗಿದ್ದ ಸರಿತಾ ಕೆ  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂಗವಾಗಿ ರಾಜ್ಯಮಟ್ಟದಲ್ಲಿ ಮಹಿಳಾ ವಿಎಲ್ಇ ಗಳನ್ನು ಗುರುತಿಸಿ ನೀಡಲ್ಪಡುವ ಪ್ರಶಸ್ತಿ ಸ್ವೀಕರಿಸಿದ ಇವರನ್ನೂ ಸೊಸೈಟಿಯ ಪರವಾಗಿ ಗೌರವಿಸಲಾಯಿತು. ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಡಾ.ಹಾಜಿ.ಯಸ್ ಅಬೂಬಕ್ಕರ್ ಆರ್ಲಪದವು ವರದಿ ವಾಚನ ಮತ್ತು ಲೆಕ್ಕಪತ್ರ ಮಂಡನೆಯನ್ನು ನಿರ್ವಹಿಸಿದರು. ಬೈಲಾ ಅಭಿವೃದ್ಧಿ ಸಮಿತಿಗೆ ಚಾಲನೆ ನೀಡಲಾಯಿತು. ಗೌತಮ್ ಕುಕ್ಯಾನ್ ಸ್ವಾಗತಿಸಿದರು. ಚಂದ್ರಶೇಖರ ಹೆಬ್ಬಾರ್ ಕೊಲ್ಯ ಪ್ರಾರ್ಥಿಸಿ ಕಾರ್ಯಕ್ರಮ ನಿರೂಪಿಸಿದರು. ಜತೆಕಾರ್ಯದರ್ಶಿ ಚಂದ್ರಾವತಿ ಗಂಜಿಮಠ ವಂದಿಸಿದರು.

 

LEAVE A REPLY

Please enter your comment!
Please enter your name here