ಜೂ.11: ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕದಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ, ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ

0

ಕಡಬ: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕ ಹಾಗೂ ಸೈಂಟ್ ಜಾರ್ಜ್ ಹೈಸ್ಕೂಲ್ ಕುಂತೂರು ಪದವು ಇದರ ಸಹಯೋಗದಲ್ಲಿ ಪುತ್ತೂರು ತಾಲೂಕು 17ನೇಯ ಸಾಹಿತ್ಯ ಸಮ್ಮೇಳನದ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ ಹಾಗೂ 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಸಾರ್ವತ್ರಿಕ ಪರೀಕ್ಷೆಯ ಪ್ರಥಮ ಭಾಷೆ ಕನ್ನಡದಲ್ಲಿ 125ರಲ್ಲಿ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಜೂ.11ರಂದು ಅಪರಾಹ್ನ ಕುಂತೂರು ಪದವು ಸೈಂಟ್ ಜಾರ್ಜ್ ಪ್ರೌಢಶಾಲೆಯಲ್ಲಿ ನಡೆಯಲಿದೆ ಎಂದು ಕಸಾಪ ಕಡಬ ತಾಲೂಕು ಘಟಕದ ಅಧ್ಯಕ್ಷ ಕೆ.ಸೇಸಪ್ಪ ರೈಯವರು ತಿಳಿಸಿದ್ದಾರೆ.

ರಾಮಕುಂಜ ಕುಂಡಾಜೆ ಸರಕಾರಿ ಕಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯ ಪಿ.ಎಸ್.ನಾರಾಯಣರವರು ಉಪನ್ಯಾಸ ನೀಡಲಿದ್ದಾರೆ.
ಕುಂತೂರು ಪದವು ಸೈಂಟ್ ಜಾರ್ಜ್ ಪ್ರೌಢಶಾಲೆಯ ಸಂಚಾಲಕ ರೋಯಿ ಅಬ್ರಹಾಂ, ಮಹಮ್ಮದ್ ಕುಂಞಿ ಕಡಬ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ 125ರಲ್ಲಿ 125 ಅಂಕ ಪಡೆದ ಆತೂರು ಆಯಿಶಾ ಹೆಣ್ಮಕ್ಕಳ ಪ್ರೌಢಶಾಲೆಯ ಹಮಿದಾ ವಫ ಯು., ಖದೀಜಾ ನಿಹಾಲ, ಹಮ್ನ ಝೈನಬ, ಸೈಪುನ್ನಿಸ, ಕಡಬ ಸೈಂಟ್ ಜೋಕಿಮ್ಸ್ ಪ್ರೌಢಶಾಲೆಯ ಗೌತಮಿ, ತೃಪ್ತಿ ಎಲ್.ಬಿ., ಸಿಂಚನಾ ಕೆ.ಸ್., ಕುಂತೂರು ಪದವು ಸೈಂಟ್ ಜಾರ್ಜ್ ಹೈಸ್ಕೂಲ್‌ನ ಯದುಶ್ರೀ, ಸುಜಿತ್, ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ತೃಪ್ತಾ ಎಂ.ಪಿ., ಶ್ರಾವಣಿ ಕೆ.ಎಸ್., ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಪ್ರೀತಾ ಕೆ.ಎಸ್., ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜಿನ ಸೌಮ್ಯ, ಆಶಾ ಜಿ.ಎಸ್., ಎಡಮಂಗಲ ಸರಕಾರಿ ಪ್ರೌಢಶಾಲೆಯ ಪೂಜಿತಾ ಎಂ., ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ತೃಪ್ತಿ, ವರ್ಷ, ಸಮೀದಾ, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ಅಂಜಲಿ, ಅಂಜಲಿ ಎ.ಆರ್.ಭಟ್, ಜಿತೇಶ್ ಕೆ., ಜ್ಞಾನೇಶ್ ಜೆ.ಪಿ., ಎಂ.ಧೀಮಂತ ಹೆಬ್ಬಾರ್, ಸೃಜನ್ ಕೆ., ಭೂಮಿಕ ಕೆ., ಸುಬ್ರಹ್ಮಣ್ಯ ಡಿ.ಎಸ್., ಸುಕೃತಿ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಭವಹರಿ ಎಂ.ರೈ, ಸುಬ್ರಹ್ಮಣ್ಯ ಕುಮಾರಸ್ವಾಮಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಹೆಮಂತ್ ಎ.ಎನ್., ಮಾನ್ಯ ಕೆ.ಎನ್., ಪ್ರಾರ್ಥನಾ ಆರ್., ಶ್ರಾವ್ಯ ಪಿ. ರೈ, ವರುಣ್ ಕೆ.ಟಿ., ಕಡಬ ಸರಸ್ವತಿ ವಿದ್ಯಾಲಯದ ಚೈತನ್ಯ, ನವ್ಯ ಕೆ.ಪಿ., ಕಡಬ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸ್ಪೂರ್ತಿ, ಕಾಣಿಯೂರು ಪ್ರಗತಿ ಆಂಗ್ಲಮಾಧ್ಯಮ ಶಾಲೆಯ ಅಪರ್ಣ ಬಿ., ಭೂಮಿಕ ಎಮ್., ದೀಪ್ತಿ ಬಿ.ಎಸ್., ಚೈತನ್ಯ ಕೆ., ಜನನಿ ಸಿ., ನಿಧಿ ರೈ ಡಿ., ರಕ್ಷಾ ಎಂ., ಸೌಭಾಗ್ಯ ಎ., ಕಾಣಿಯೂರು ಪ್ರಗತಿ ಕನ್ನಡ ಮಾಧ್ಯಮ ಶಾಲೆಯ ಹಂಸಿನಿ, ಸುಶಾಂತ್ ಪಿ.ಬಿ., ವನ್ಯಶ್ರೀ ಎಮ್.ವಿ., ಅರ್ಜುನ್ ಎ., ಕೃತಿ ಎಲ್.,ರವರಿಗೆ ಗೌರವಾರ್ಪಣೆ ನಡೆಯಲಿದೆ. ಎಸ್‌ಎಸ್‌ಎಲ್‌ಸಿಯಲ್ಲಿ 620 ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಜೀವನ್ ಎಸ್., ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ಧೀಮಂತ್ ಹೆಬ್ಬಾರ್, ಭೂಮಿಕಾ ಕೆ.,ಜ್ಞಾನೇಶ್ ಜೆ.ಪಿ., ಸುಬ್ರಹ್ಮಣ್ಯ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅನನ್ಯ ಪಿ.ಬಿ., ಮಾನ್ಯ ಕೆ.ಎನ್., ಪ್ರಾರ್ಥನ ಆರ್., ಶ್ರಾವ್ಯ ಪಿ.ರೈ, ಕಾಣಿಯೂರು ಪ್ರಗತಿ ಆಂಗ್ಲಮಾಧ್ಯಮ ಶಾಲೆಯ ರಕ್ಷಾ, ಸೌಭಾಗ್ಯ ಎ.,ರವರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here