ಪುತ್ತೂರು: ದರ್ಬೆಯ ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲಾ ಮಂತ್ರಿಮಂಡಲದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಜೂ.9ರಂದು ನಡೆಯಿತು.
ಜೂ.4ರಂದು ಶಾಲಾ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಮತದಾನವು ನಡೆದಿದ್ದು, ಶಾಲಾ ನಾಯಕನಾಗಿ 7ನೇ ತರಗತಿಯ ಶೋನ್ ಲೋಬೊ ಮತ್ತು ಸಹ ನಾಯಕನಾಗಿ 6ನೇ ತರಗತಿಯ ಕ್ಲೈವ್ ಪಿಂಟೊ ಇವರು ಆಯ್ಕೆಯಾದರು. ನಂತರ ರಚನೆಯಾದ ಶಾಲಾ ಮಂತ್ರಿಮಂಡಲಕ್ಕೆ ಡೆಲಿಟಾ ಫೆರ್ನಾಂಡಿಸ್, ಅಲ್ವಿನಾ ರೆಬೆಲ್ಲೊ, ಶಝಾ ಫಾತಿಮಾ, ನೋಯೆಲ್ ಡಿ’ಸೋಜ, ಸೈಫ್, ಇಂಚರ, ಹರ್ಷವರ್ಧನ್, ವೇದಾ, ಆತೀಫ್, ಮತ್ತು ಕೌಲತ್ ಆಯ್ಕೆಯಾದರು.
ಶಾಲಾ ಮುಖ್ಯೋಪಾಧ್ಯಾಯಿನಿ ಸಿ|ಲೋರಾ ಪಾಯಸ್ ಪ್ರಮಾಣವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.