ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು, ತುಳುನಾಡ್ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿ ಸೌದಿ ಅರೇಬಿಯಾದ ಜಿದ್ದಾದಲ್ಲಿ ತುಳುನಾಡ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಸೀಸನ್ 5 ಉದ್ಘಾಟನೆ

0

ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು ಮತ್ತು ತುಳುನಾಡ್ ಕ್ರಿಕೆಟ್ ಅಸೋಸಿಯೇಷನ್ ಇದರ ಆಶ್ರಯದಲ್ಲಿ ಸುಧೀರ್ ರೆಂಟಲ್ ಮತ್ತು ಫಯಾಝ್ ಮಲ್ಪೆ ಪ್ರಾಯೋಜಕತ್ವದಲ್ಲಿ ತುಳುನಾಡ್ ಪ್ರೀಮಿಯರ್ ಲೀಗ್-ಸೀಸನ್ 5, ಸುಧೀರ್ ಕಪ್-2024 ಸೌದಿ ಅರೇಬಿಯಾದ ಜಿದ್ದಾದಲ್ಲಿ ಉದ್ಘಾಟನೆಗೊಂಡಿತು.


ಪಂದ್ಯಾಕೂಟದಲ್ಲಿ ಕುಡ್ಲ ಬುಲ್ಸ್(ಜೈಸನ್ ಡಿಕೋಸ್ಟಾ), ಜಝಾ ಸ್ಪೋರ್ಟ್ಸ್(ಜಾವೇದ್ ಮಿಯಾಂದಾದ್), ಎಸ್ ಎಂ ಬುಲ್ಸ್(ಸಮದ್), ಕರಾವಳಿ ವಾರಿಯರ್ಸ್(ಅಲ್ತಾಫ್), ನೈಟ್ ರೈಡ್ ಕಾಂಬಾಡ್(ಫೌಜಾನ್ ಶೈಕ್), ಗ್ರೇ ಲೈನ್ (ಜೈನುದ್ದೀನ್ ಮುನ್ನೋರ್) ತಂಡಗಳು ಭಾಗವಹಿಸಲಿದೆ.
ಅತಿಥಿಗಳಾಗಿ ಸುಧೀರ್ ರೆಂಟಲ್, ಫಯಾಝ್ ಮಲ್ಪೆ, ಜಾವೇದ್ ಮಿಯಾಂದಾದ್, ಸಲೀಂ ನಂದಾವರ, ಇರ್ಫಾನ್ ಕೃಷ್ಣಾಪುರ, ಇರ್ಷಾದ್ ಮಕ್ಕ, ಶಂಸುದ್ದೀನ್ ಉಚ್ಚಿಲ್, ದಿನಕರ್ ವೆಂಕಟ್, ಶಹೀರ್ ಎಸ್‌ಎಸ್‌ಕ್ಯೂ ಭಾಗವಹಿಸಿದ್ದರು.
ಪಂದ್ಯಾಕೂಟದ ಆಯೋಜಕರಾದ ಹುರೈಸ್ ಪುತ್ತೂರು ಕೆ ಎಸ್ ಎ, ಸಿನಾನ್ ಪೆರ್ನೆ ನೌಶಾದ್ ಮೊಟ್ಟೆತಡ್ಕ, ಇಫ್ರಾಝ್ ಬೆಳುವಾಯ್, ತಂಜಿಲ್ ವಾಮಂಜೂರ್, ಶಮೀರ್ ಅಹ್ಮದ್ ಬಾವ ಯಶಸ್ವಿಯಾಗಿ ಆಯೋಜಿಸಿದರು. ಪಂದ್ಯಾಕೂಟ ಏಳು ವಾರ ನಡೆಯಲಿದೆ.

LEAVE A REPLY

Please enter your comment!
Please enter your name here