ನಾಯಕನಾಗಿ ಮಹಮ್ಮದ್ ಔಫ್ , ಉಪನಾಯಕಿಯಾಗಿ ಕೀರ್ತನ
ಪಾಣಾಜೆ:ಸುಬೋಧ ಪ್ರೌಢಶಾಲಾ 2022-23 ನೇ ಸಾಲಿನ ವಿದ್ಯಾರ್ಥಿ ನಾಯಕನಾಗಿ ಮಹಮ್ಮದ್ ಔಫ್ (10ನೇ ತರಗತಿ) ಹಾಗೂ ಉಪನಾಯಕಿಯಾಗಿ ಕೀರ್ತನ (10 ನೇ ತರಗತಿ) ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿ ಸಂಘದ ಇತರ ಸದಸ್ಯರಾಗಿ ನವ್ಯಶ್ರೀ (10ನೇ), ಮಧುಶ್ರೀ (9ನೇ), ತನುಶ್ರೀ (10ನೇ), ಮನ್ವಿತ್ (8ನೇ), ಕೃತಿಕಾ (10ನೇ), ನೆಬಿಸತುಲ್ ಫಾಸಿಲ(10ನೇ), ಚೇತನ್ (10ನೇ)ಅನುಪ್ರಿಯ(10ನೇ)ಪ್ರದೀಪ (10ನೇ)ತೇಜಸ್ (10ನೇ)ಮರಿಯಮ್ಮತ್ ಮಶ್ ಮೂಮ(10ನೇ)ಜಗತ್ ಎಸ್ ಕೆ (10ನೇ), ಸುಪ್ರೀತ(10ನೇ), ಫಾಯಿಝ(10ನೇ), ಅರ್ಪಿತ ಪಿ ಕೆ(10ನೇ) ಇವರನ್ನು ಆಯ್ಕೆ ಮಾಡಲಾಯಿತು.
ಹತ್ತನೇ ತರಗತಿಯ ಅರ್ಪಿತಾ ಪಿ ಕೆ ಹಾಗೂ ಒಂಬತ್ತನೇ ತರಗತಿಯ ದೀಪಿಕಾ ಅವರು ಶಾಲಾ ಸಂಸತ್ತಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಗೊಂಡರು. ಸಹಶಿಕ್ಷಕಿಯರಾದ ನಿರ್ಮಲಾ, ವಿನುತಾ ಈ ಆಯ್ಕೆ ಪ್ರಕ್ರಿಯೆ ನಡೆಸಿ ಕೊಟ್ಟರು. ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.