ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ; ಅಧ್ಯಕ್ಷ:ಮೊಹಮದ್ ರಫೀಕ್, ಕಾರ್ಯದರ್ಶಿ:ಚಂದ್ರಹಾಸ ರೈ, ಕೋಶಾಧಿಕಾರಿ:ಡಾ|ರಾಮಚಂದ್ರ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ 2022-23ನೇ ಸಾಲಿನ ನೂತನ ಅಧ್ಯಕ್ಷರಾಗಿ ಮೊಹಮ್ಮದ್ ರಫೀಕ್ ದರ್ಬೆ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಹಾಸ ರೈ ಬಿ, ಕೋಶಾಧಿಕಾರಿಯಾಗಿ ಡಾ|ರಾಮಚಂದ್ರರವರು ಆಯ್ಕೆಯಾಗಿದ್ದಾರೆ.

ಉಳಿದಂತೆ ನಿಕಟಪೂರ್ವ ಅಧ್ಯಕ್ಷರಾಗಿ ನವೀನ್‌ಚಂದ್ರ ನಾಯ್ಕ್, ಸಹ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಎ.ಎಲ್, ನಿಯೋಜಿತ ಅಧ್ಯಕ್ಷರಾಗಿ ಪುರುಷೋತ್ತಮ್ ನಾಯ್ಕ್, ಉಪಾಧ್ಯಕ್ಷರಾಗಿ ಅಶೋಕ್ ನಾಯ್ಕ್, ಸಾರ್ಜಂಟ್ ಎಟ್ ಆರ್ಮ್ಸ್ ಆಗಿ ಜಯಪ್ರಕಾಶ್ ಅಮೈ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಅಶ್ರಫ್ ಮುಕ್ವೆ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಮಂಜುನಾಥ್ ಆಚಾಯ, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಡಾ|ರಾಜೇಶ್ ಬೆಜ್ಜಂಗಳ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಕವನ್ ನಾಯ್ಕ್, ಯೂತ್ ಸರ್ವಿಸ್ ನಿರ್ದೇಶಕರಾಗಿ ರಾಕೇಶ್ ಶೆಟ್ಟಿ, ಚೇರ್‌ಮ್ಯಾನ್‌ಗಳಾಗಿ ನೋಯಲ್ ಡಿ’ಸೋಜ(ಪೋಲಿಯೋ ಪ್ಲಸ್), ಶಿವರಾಮ ಎಂ.ಎಸ್(ಟಿ.ಆರ್.ಎಫ್), ಪುರುಷೋತ್ತಮ್ ಶೆಟ್ಟಿ(ಡಿಸ್ಟ್ರಿಕ್ಟ್ ಪ್ರಾಜೆಕ್ಟ್), ಪದ್ಮನಾಭ ಶೆಟ್ಟಿ(ಮೆಂಬರ್‌ಶಿಪ್ ಡೆವಲಪ್‌ಮೆಂಟ್), ಭಾರತಿ ಎಸ್.ರೈ(ಟೀಚ್), ರಮೇಶ್ ರೈ ಡಿಂಬ್ರಿ(ವಿನ್ಸ್), ಸನತ್ ಕುಮಾರ್ ರೈ(ವೆಬ್), ಪ್ರಮೋದ್ ಕುಮಾರ್ ಕೆ.ಕೆ(ಸಾಂಸ್ಕೃತಿಕ), ಪ್ರದೀಪ್ ಬೊಳ್ವಾರು(ಕ್ರೀಡೆ), ಅಮಿತಾ ಶೆಟ್ಟಿ(ಅಟೆಂಡನ್ಸ್ ಕಮಿಟಿ), ರಮೇಶ್ ರೈ ಬೋಳೋಡಿ(ಫೆಲೋಶಿಪ್)ರವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಧ್ಯಕ್ಷ ರಫೀಕ್ ರೋಯಲ್ ಪರಿಚಯ:

ನೂತನ ಅಧ್ಯಕ್ಷರಾದ ಮೊಹಮ್ಮದ್ ರಫೀಕ್ ದರ್ಬೆರವರು ತಮ್ಮ ಪ್ರಾಥಮಿಕ ವಿದ್ಯಾಬ್ಯಾಸವನ್ನು ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ, ಪ್ರೌಢಶಿಕ್ಷಣವನ್ನು ಫಿಲೋಮಿನಾ ಪ್ರೌಢಶಾಲೆಯಲ್ಲಿನ ವ್ಯಾಸಂಗ(1990-93)ದ ಸಂದರ್ಭದಲ್ಲಿ ಶಾಲಾ ನಾಯಕನಾಗಿ ಗುರುತಿಸಿಕೊಂಡಿದ್ದರು. ನಂತರ ಮಂಗಳೂರಿನ ಇಂಪಾಕ್ಟ್ ಇನ್ಸಿಟ್ಯೂಟ್‌ನಲ್ಲಿ ಸೆ0ಟ್ರಲ್ ಎ.ಸಿ ಕೋರ್ಸ್ ಮುಗಿಸಿ, ವಾಸ್ತುಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರವನ್ನುವನ್ನು ಕರಗತ ಮಾಡಿಕೊಂಡರು. 2016 ರಿಂದ 2018ರ ವರೆಗೆ ಚಂಢೀಗಡದ ಆಲ್ ಇಂಡಿಯಾ ಕ್ರೈಮ್ ಪ್ರಿವೆಂಶನ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. 2017ರಲ್ಲಿ ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ನಮ್ಮ ಕರ್ನಾಟಕ ಒಕ್ಕೂಟ(ರಿ) ಎಂಬ ಸಂಘಟನೆಯನ್ನು ಸ್ಥಾಪಿಸಿ ಅದರ ರಾಜ್ಯಾಧ್ಯಕ್ಷರಾಗಿದ್ದರು. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ 2018-2021ರವರೆಗೆ ಸತತ 4 ವರ್ಷ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಇದೀಗ 3 ವರ್ಷದಿಂದ ಪುತ್ತೂರು ಶಾಸಕರ ಅಧ್ಯಕ್ಷತೆಯಲ್ಲಿರುವ ಪುತ್ತೂರು ಸರಕಾರಿ ಅಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದರ್ಬೆ ಮಸೀದಿಯಲ್ಲಿ 1996 ಸತತ 4 ವರ್ಷ ಪ್ರಧಾನ ಕಾರ್ಯದರ್ಶಿಯಾಗಿದ್ದು, 1996ರಲ್ಲಿ ಅನ್ಸಾರುದ್ದೀನ್ ಜಮಾತ್ ಕಮಿಟಿ ಪುತ್ತೂರು ಇಲ್ಲಿ ಆಹ್ವಾನಿತ ಸದಸ್ಯರಾಗಿ, ಮುಕ್ರಂಪಾಡಿ ಮಸೀದಿಯಲ್ಲಿ 2008ರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಇಂಜಿನಿಯರಿAಗ್ ಆ್ಯಂಡ್ ಫರ್ನಿಚರ್ ವರ್ಕ್್ಸ ಮಾಲಕರಾಗಿರುವ ಮೊಹಮದ್ ರಫೀಕ್‌ರವರು 2017-18ರಲ್ಲಿ ರೋಟರಿ ಕ್ಲಬ್ ಪುತ್ತೂರು ಸೆ0ಟ್ರಲ್‌ನ ಚಾರ್ಟರ್ ಸೆಕ್ರೆಟರಿಯಾಗಿ ಕೆಲಸ ನಿರ್ವಹಿಸಿ ಇದೀಗ ರೋಟರಿ ಕ್ಲಬ್ ಪುತ್ತೂರು ಸೆ0ಟ್ರಲ್‌ನ 2022-23ರ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಕಾರ್ಯದರ್ಶಿ ಚಂದ್ರಹಾಸ ರೈ ಪರಿಚಯ:

ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಚಂದ್ರಹಾಸ ರೈಯವರು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾಗಿ 1986ರಿಂದ ಸೇವೆಗೈಯುತ್ತಿದ್ದಾರೆ. 2009ರಿಂದ 2019ರ ವರೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟಾçರ್ ಆಗಿ ಕರ್ತವ್ಯ ನಿರ್ವಹಣೆಯ ಜೊತೆಗೆ ಬ್ಯಾರಿ, ಕೊಂಕಣಿ, ಕೊಡವ ಮತ್ತು ಅರೆಭಾಷೆ ಅಕಾಡೆಮಿಯಲ್ಲೂ ರಿಜಿಸ್ಟ್ರಾರ್ ಆಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ, 1997ರಲ್ಲಿ ಜೇಸಿಐ ಇಂಡಿಯಾ ಇದರ ವಲಯ 15ರಲ್ಲಿ ವಲಯಾಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿರುತ್ತಾರೆ.

ಕೋಶಾಧಿಕಾರಿ ಡಾ|ರಾಮಚಂದ್ರ ಪರಿಚಯ:

ನೆಲ್ಯಾಡಿ ನಿವಾಸಿ ಸೇಸಪ್ಪ ಗೌಡ ಹಾಗೂ ಧರ್ಣಮ್ಮ ದಂಪತಿ ಪುತ್ರರಾಗಿರುವ ಡಾ|ರಾಮಚಂದ್ರರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ನೆಲ್ಯಾಡಿಯಲ್ಲಿ ಪಡೆದು, ಬಳಿಕ ಪ್ರೌಢ ಹಾಗೂ ಪದವಿ ಶಿಕ್ಷಣವನ್ನು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಪಡೆದಿರುತ್ತಾರೆ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿಪಿಎಡ್ ಪದವಿಯನ್ನು ಮೂರನೇ ರ‍್ಯಾಂಕ್, ಸ್ನಾತಕೋತ್ತರ ಎಂಪಿಎಡ್ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ ಇಲ್ಲಿ ಮೂರನೇ ರ‍್ಯಾಂಕ್‌ನೊಂದಿಗೆ ತೇರ್ಗಡೆ ಹೊಂದಿರುತ್ತಾರೆ. ಬಳಿಕ ಭಾರತದ ಅತ್ತುö್ಯನ್ನತ ಕ್ರೀಡಾ ಸಂಸ್ಥೆಯಾದ ಸಾಯಿ ಸ್ಪೋರ್ಟ್ಸ್ ಆಥರಿಟಿ ಆಫ್ ಇಂಡಿಯದಲ್ಲಿ NIS(ಎನ್‌ಐಎಸ್) ಡಿಪ್ಲೋಮಾ, ಅಣ್ಣಾಮಲೈ ವಿಶ್ವವಿದ್ಯಾನಿಲಯದಿಂದ ಎಂಫಿಲ್ ಪದವಿ, ದ್ರಾವಿಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್(ಪಿಎಚ್‌ಡಿ) ಪದವಿಯನ್ನು ಪಡೆದಿರುತ್ತಾರೆ. ವಿದ್ಯಾರ್ಥಿ ಜೀವನದಲ್ಲಿ ರಾಷ್ಟ್ರೀಯ ಕ್ರೀಡಾಪಟುವಾಗಿದ್ದು ಸತತವಾಗಿ ಮೂರು ವರ್ಷ ಮಂಗಳೂರು ವಿಶ್ವವಿದ್ಯಾನಿಲಯವನ್ನು ಅಥ್ಲೆಟಿಕ್ಸ್ ಪ್ರತಿನಿಧಿಸಿ ಅಖಿಲ ಭಾರತ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಭಾಗವಹಿಸಿರುತ್ತಾರೆ. ಸುಮಾರು ಹತ್ತು ಬಾರಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕವನ್ನು ಪಡೆದಿರುತ್ತಾರೆ ಹಾಗೂ ಹಲವಾರು ಕ್ರೀಡಾಕೂಟಗಳಲ್ಲಿ ತಾಂತ್ರಿಕ ಅಧಿಕಾರಿಯಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ಶೈಕ್ಷಣಿಕವಾಗಿ ರಾಷ್ಟ್ರೀಯ ಮತ್ತು ಅಂರ‍್ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧವನ್ನು ಮಂಡಿಸಿ ಉತ್ತಮ ಪ್ರಬಂಧ ಮಂಡನೆ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಮಂಗಳೂರು ವಿವಿ ದೈಹಿಕ ಶಿಕ್ಷಣದ ಸ್ನಾತಕೋತ್ತರ ವಿಭಾಗದ ವಿಶೇಷ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದು, ವಿಶ್ವವಿದ್ಯಾನಿಲಯದ ಬಿಒಇ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಗಳೂರು ವಿವಿಯ ಅಥ್ಲೆಟಿಕ್ಸ್ ತಂಡದ ತರಬೇತುದಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚೆಗೆ ಭಾರತದ(ಎಎಫ್‌ಐ) ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾದ ಉದ್ಘೋಷಕರಾಗಿಯೂ ಆಯ್ಕೆಯಾಗಿರುತ್ತಾರೆ. ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾದ ಬೆಂಗಳೂರಿನ ರಾಷ್ಟ್ರೀಯ ವಿದ್ಯಾಲಯ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೇವೆಯನ್ನು ಸಲ್ಲಿಸಿ, ತದನಂತರ 2010ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಆಯ್ಕೆಗೊಂಡು ಪ್ರಸ್ತುತ ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

[box type=”info” bg=”#” color=”#” border=”#” radius=”20″]ಜು.4: ಪದ ಪ್ರದಾನ…

ಜು.4 ರಂದು ಬಪ್ಪಳಿಗೆ-ಬೈಪಾಸ್ ಇಲ್ಲಿನ ಆಶ್ಮಿ ಕಂಫರ್ಟ್ನಲ್ಲಿ ಸಂಜೆ ನೂತನ ಪದಾಧಿಕಾರಿಗಳ ಪದ ಪ್ರದಾನ ಕಾರ್ಯಕ್ರಮ ನೆರವೇರಲಿದ್ದು, ರೋಟರಿ ಜಿಲ್ಲೆ 3181 ಇದರ ಪಿಡಿಜಿ ಮೇಜರ್ ಡೋನರ್ ಜೋಸೆಫ್ ಮ್ಯಾಥ್ಯೂರವರು ಪದ ಪ್ರದಾನ ಮಾಡಲಿದ್ದಾರೆ. ವಲಯ ಐದರ ಅಸಿಸ್ಟೆಂಟ್ ಗವರ್ನರ್ ಎ.ಜೆ ರೈ, ವಲಯ ಸೇನಾನಿ ಡಾ|ಹರ್ಷ ಕುಮಾರ್ ರೈ ಮಾಡಾವುರವರು ಭಾಗವಹಿಸಲಿದ್ದಾರೆ.[/box]

LEAVE A REPLY

Please enter your comment!
Please enter your name here