ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ.2.45 ಕೋಟಿ ದಾಖಲೆಯ ಲಾಭ – ರೂ.419 ಕೋಟಿ ವಾರ್ಷಿಕ ವ್ಯವಹಾರ, ಶೇ.96.60 ಸಾಲ ವಸೂಲಾತಿ

0

ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2023-24ನೇ ಆರ್ಥಿಕ ವರ್ಷದಲ್ಲಿ ಅದ್ವಿತೀಯ ಸಾಧನೆ ಮಾಡಿದೆ. ಆಡಿಟ್ ಪೂರ್ವ ಅಂಕಿ ಅಂಶಗಳ ಪ್ರಕಾರ ಸಂಘವು ವರ್ಷಾಂತ್ಯಕ್ಕೆ ರೂ.419ಕೋಟಿ ವ್ಯವಹಾರ ನಡೆಸಿ ರೂ.2.45ಕೋಟಿ ಅಡಿಟ್ ಪೂರ್ವ ಲಾಭ ಗಳಿಸಿದೆ. ಸಂಘದ ಇತಿಹಾಸದಲ್ಲಿಯೇ ದಾಖಲೆಯ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ನವೀನ್ ಡಿ ಹೇಳಿದರು.

ಸಂಘದ ಕಚೇರಿ ಸಭಾಂಗಣದಲ್ಲಿ ಮೇ.14ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಅವರು 2023-24ನೇ ಸಾಲಿನ ವಾರ್ಷಿಕ ವ್ಯವಹಾರದ ಮಾಹಿತಿ ನೀಡಿದರು.
111 ವರ್ಷಗಳ ಇತಿಹಾಸವಿರುವ ಸಂಘವು ಆನಾಜೆ ಹಾಗೂ ಕೈಂದಾಡಿಯಲ್ಲಿ ಶಾಖೆಯನ್ನು ಹೊಂದಿದ್ದು ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿಯನ್ನು ಕಂಡಿದೆ. 2023-24ನೇ ಸಾಲಿನಲ್ಲಿ ಗಣನೀಯ ಸಾಧನೆ ಮಾಡಿದೆ. ಸಂಘವು ವರದಿ ವರ್ಷದಲ್ಲಿ 4,714 ಮಂದಿ ಸದಸ್ಯರಿಂದ ರೂ.6,06,53,000 ಪಾಲು ಬಂಡವಾಳ ಹೊಂದಿದೆ. ರೂ.2,73,81,830ಕ್ಷೇಮ ನಿಧಿ, ರೂ.45,45,56,331 ಠೇವಣಿಗಳನ್ನು ಹೊಂದಿದೆ. ರೂ.78,09,56,688 ಸಾಲ ವಿತರಿಸಲಾಗಿದೆ. ರೂ.43,57,08,058 ಬ್ಯಾಂಕ್ ಸಾಲಹೊಂದಿದೆ. ಒಟ್ಟು ರೂ.419ಕೋಟಿ ವ್ಯವಹಾರ ನಡೆಸಿ ರೂ.2,44,99,504 ಲಾಭಗಳಿಸಿದೆ. ಶೇ.96.60 ಸಾಲ ವಸೂಲಾತಿಯಾಗಿದೆ.

ಹೊಸ ಯೋಜನೆಗಳು:
ಸಂಘದ ಸದಸ್ಯರ ಅನುಕೂಲಕ್ಕಾಗಿ ಕೈಂದಾಡಿ ಶಾಖೆಯನ್ನು ನವೀಕರಣಗೊಳಿಸಿ ಅಲ್ಲಿ ಬ್ಯಾಂಕಿAಗ್ ಸೇವೆ ಆರಂಭಿಸಲಾಗಿದೆ. ರೈತರಿಗಾಗಿ ಕೃಷಿ ಸಲಕರಣಗಳ ಮಾರಾಟ ಕೇಂದ್ರ ಪ್ರಾರಂಭಿಸಲಾಗಿದೆ. ಸದಸ್ಯರಿಗೆ ಆರು ತಿಂಗಳ ಅವಧಿಗೆ, 1 ತಿಂಗಳ ಬಡ್ಡಿ ರಹಿತ ರಸಗೊಬ್ಬರ ಸಾಲ ನೀಡಲಾಗುತ್ತಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಶವ ಸುಡುವ ಪೆಟ್ಟಿಗೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಸಾಲಗಾರ ಸದಸ್ಯರಿಗೆ ರೂ.5000 ಮರಣ ಸಾಂತ್ವನ ನಿಧಿ ಹಾಗೂ ರೂ.2ಲಕ್ಷದ ಉಚಿತ ಅಪಘಾತ ವಿಮೆಯನ್ನು ಪ್ರಾರಂಭಿಸಲಾಗಿದೆ. ಸುರಕ್ಷತೆಯ ದೃಷ್ಠಿಯಿಂದ ಪ್ರಧಾನ ಕಚೇರಿಯ ಎಲ್ಲಾ ವಿಭಾಗಗಳು ಹಾಗೂ ಆನಾಜೆ ಮತ್ತು ಕೈಂದಾಡಿ ಶಾಖೆಗೆ ಸಿಸಿಟಿವಿ ಅಳವಡಿಸಲಾಗಿದೆ. ನಿರಖು ಠೇವಣಿಯ ಬಡ್ಡಿ ದರವನ್ನು ಶೇ.ಅರ್ಧದಷ್ಟು ಏರಿಕೆ ಮಾಡಲಾಗಿದೆ. ಆರ್‌ಡಿಗೆ ಶೇ.7 ಬಡ್ಡಿದರ ನೀಡಲಾಗುತ್ತಿದೆ. ಮುಂದೆ ಸಾಲ ಮರುಪಾವತಿಸುವ ಸುಸ್ಥಿ ಸಾಲಗಾರರಿಗೆ ಬಡ್ಡಿ ದರವನ್ನು ಕಡಿಮೆ ಮಾಡುವುದು, ರೈತರಿಗೆ ಕೃಷಿ ಸಲಕರಣೆಗಳನ್ನು ಬಾಡಿಗೆಗೆ ನೀಡುವುದು, ಸಂಘದ ನಿವೇಶನದಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಿಸಿ ಅದರಲ್ಲಿ ಮಾಲ್ ಮಾದರಿಯಲ್ಲಿ ಎಲ್ಲಾ ವ್ಯವಹಾರಗಳನ್ನು ನಡೆಸುವ ಯೋಜನೆಯಿದೆ ಎಂದು ಅಧ್ಯಕ್ಷ ನವೀನಡ್ ಡಿ ಮಾಹಿತಿ ನೀಡಿದರು.
ಸಂಘವು ಉತ್ತಮ ಸಾಧನೆ ಮಾಡಿದ್ದು ರೂ.2.45ಕೋಟಿ ದಾಖಲೆಯ ಲಾಭ ಗಳಿಸಿದೆ. ಉತ್ತಮ ವ್ಯವಹಾರ ನಡೆಸಿ, ಉತ್ತಮ ವಸೂಲಾತಿ ಮಾಡಿದೆ. ಶೇ.100 ಸಾಲವಸೂಲಾತಿಯೇ ಮುಂದಿನ ಗುರಿಯಾಗಿದೆ. ಸಂಘದ ಸಾಧನೆ ಸಂತಸ ತಂದಿದೆ. ಸಂಘದ ಸಾಧನೆಗೆ ಕಾರಣೀಕರ್ತರಾದ ಸದಸ್ಯರಿಗೆ, ಗ್ರಾಹಕರಿಗೆ ಕೃತಜ್ಷತೆ ಸಲ್ಲಿಸುತ್ತೇನೆ. ಸಂಘದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರು ಸಹಕರಿಸುವಂತೆ ಅಧ್ಯಕ್ಷ ನವೀನ್ ಡಿ ವಿನಂತಿಸಿದರು.

LEAVE A REPLY

Please enter your comment!
Please enter your name here