ಪುತ್ತೂರು ಕಾಂಗ್ರೆಸ್ ಪ್ರಕೃತಿ ವಿಕೋಪ ನಿರ್ವಹಣಾ ತಂಡದ ಉದ್ಘಾಟನೆ

0

ಪುತ್ತೂರು : ಪುತ್ತೂರು ಕಾಂಗ್ರೆಸ್‌ನಿಂದ ಪ್ರಕೃತಿ ವಿಕೋಪ ನಿರ್ವಹಣಾ ತರಬೇತಿ ಪಡೆದ ತಂಡದ ನೇತೃತ್ವದಲ್ಲಿ ಪುತ್ತೂರು ಕಾಂಗ್ರೆಸ್ ರಕ್ಷಣಾ ತಂಡ ಮಾಡಲಾಗಿದ್ದು ಇದರ ಉದ್ಘಾಟನೆಯು ಜು.೧೨ರಂದು ಪುತ್ತೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.

 

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಪುತ್ತೂರು ಕಾಂಗ್ರೆಸ್ ಪ್ರಕೃತಿ ವಿಕೋಪ ನಿರ್ವಹಣಾ ತಂಡದ ಉದ್ಘಾಟನೆ ನೆರವೇರಿಸಿ ಮಾತನಾಡಿ ಪ್ರಕೃತಿ ವಿಕೋಪದಡಿಯಲ್ಲಿ ಯಾವುದೇ ಸಂದರ್ಭದಲ್ಲಿ ಈ ತಂಡ ಸದಾ ಸನ್ನದ್ಧವಾಗಿದ್ದು ಆ ಮೂಲಕ ಸಮಾಜಕ್ಕೆ ಸೇವೆಯನ್ನು ನೀಡಲು ಮುಂದಾಗಿದೆ ಎಂದು ಹೇಳಿದರು. ಕೇವಲ ಫೋಸ್ ಕೊಡುವ ತಂಡದವರ ಹಾಗೆ ಆಗದೆ ಸಮಾಜಕ್ಕೆ ಸಹಾಯ ಸಹಕಾರ ನೀಡುವ ಮೂಲಕ ಕಾಂಗ್ರೆಸ್ ತಂಡ ಎಂದರೆ ಹೀಗಿರಬೇಕು ಎಂಬ ವಿಶ್ವಾಸ ಮೂಡಿಬರಬೇಕು ಎಂದರು. ಈ ತಂಡಕ್ಕೆ ಉತ್ತಮ ಕೆಲಸ ಮಾಡಲು ಮತ್ತು ಸಮಾಜಕ್ಕೆ ಹೆಚ್ಚಿನ ಸಹಾಯ ನೀಡಲು ದೇವರು ಅನುಗ್ರಹಿಸಲಿ ಎಂದು ಅವರು ಹೇಳಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಮಾತನಾಡಿ ಕಾಂಗ್ರೆಸ್ ಪ್ರಕೃತಿ ವಿಕೋಪ ತಂಡವು ಅತ್ಯುತಮ ಸೇವಾ ತಂಡವಾಗಿ ಮೂಡಿಬರಲಿ. ನಮಗೆ ಅವಶ್ಯಕವಾಗಿ ಪ್ರಕೃತಿಯಲ್ಲಿ ತೊಂದರೆ ಉಂಟಾದಗ ಅವರ ರಕ್ಷಣೆಗೆ ಹೋಗಿ ಈ ತಂಡ ಸಹಾಯಹಸ್ತ ನೀಡುವಂತಾಗಬೇಕು ಎಂದು ಅವರು ಹೇಳಿದರು. ಕಾಂಗ್ರೆಸ್‌ನ ಈ ರಕ್ಷಣಾ ತಂಡದಲ್ಲಿ ಕಳೆದ ವರ್ಷ ಮಡಿಕೇರಿಯ ಜೋಡುಪಲ್ಲದಲ್ಲಿ ಕಾರ್ಯಾಚರಣೆ ನಡೆಸಿದವರು ಇದ್ದು ಈ ತಂಡ ಅತ್ಯುತ್ತಮ ಮೂಡಿಬರಲಿ ಎಂದು ಹೇಳಿದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಮಾತನಾಡಿ ಸರಕಾರದ ಯಾವುದೇ ಭಾಗವಾಗಿರದ ವಿರೊಧ ಪಕ್ಷದಲ್ಲಿ ಯಾವುದೇ ಸಂಪನ್ಮೂಲಗಳಿಲ್ಲದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸಮಾಜಸೇವೆಯಲ್ಲಿ ಮುಂದೆ ಇದೆ ಎಂದು ಅವರು ಹೇಳಿದರು. ಈ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದು ಸಾರ್ವಜನಿಕರಿಗೆ ಪ್ರಕೃತಿ ವಿಕೋಪಕ್ಕೆ ಸಂಬಂದಿಸಿ ಯಾವುದೇ ವಾರ್‌ರೂಮ್ ಕಾರ್ಯವೆಸಗಿದ್ದನ್ನು ನಾವು ನೋಡಿಲ್ಲ ಎಂದು ಅವರು ಹೇಳಿದರು. ಈ ತಂಡಕ್ಕೆ ಅತ್ಯುತ್ತಮ ಸೇವೆ ಮಾಡಲು ಭಗವಂತನು ಕರುಣಿಸಲಿ ಎಂದು ಹೇಳಿದರು. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ ಮಾತನಾಡಿ ಪ್ರಾಕೃತಿಕ ವಿಕೋಪದಿಂದ ಉಂಟಾಗುವ ಯಾವುದೇ ಅನಾಹುತಕ್ಕೆ ಸಂಬಂಧಿಸಿದಂತೆ ಎಲ್ಲಾ ತುರ್ತು ಕೆಲಸಗಳಲ್ಲಿ ಹುಮ್ಮಸ್ಸಿನಿಂದ ಕೆಲಸ ಕಾರ್ಯ ಮಾಡುವ ಮೂಲಕ ಈ ರಕ್ಷಣಾ ತಂಡ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹೇಳಿದರು.

ಕಿಸಾನ್ ಘಟಕದ ಅಧ್ಯಕ್ಷ ಮುರಳೀಧರ ಕೆಮ್ಮಾರ, ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ಅರಸ್, ಕಾರ್ಮಿಕ ಘಟಕದ ಅಧ್ಯಕ್ಷೆ ಶರೂನ್ ಸಿಕ್ವೇರಾ, ಪುತ್ತೂರು ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜ, ಕಾಂಗ್ರೆಸ್ ಮುಖಂಡ ಶಿವರಾಮ ಆಳ್ವ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹೇಶ್ ರೈ ಅಂಕೊತ್ತಿಮಾರ್, ಕಲಾವಿದ ಕೃಷ್ಣಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಸನಮ್ ನಝೀರ್, ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೀತಾ ಭಟ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮರೀಸ್ ಮಸ್ಕರೇನಸ್, ಮೆಲ್ವಿನ್ ಮೊಂತೆರೊ ಮೊದಲಾದವರು ಉಪಸ್ಥಿತರಿದ್ದರು.

ಕಾಂಗ್ರೆಸ್ ರಕ್ಷಣಾ ತಂಡ

ಪುತ್ತೂರು ಕಾಂಗ್ರೆಸ್ ರಕ್ಷಣಾ ತಂಡದಲ್ಲಿ ಕಾಂಗ್ರೆಸ್ ಜಾಲತಾಣದ ಮುಖ್ಯಸ್ಥ ಸಿದ್ದೀಕ್ ಸುಲ್ತಾನ್, ಪುತ್ತೂರು ಎನ್‌ಎಸ್‌ಯುಐ ಅಧ್ಯಕ್ಷ ಚಿರಾಗ್ ರೈ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ರಶೀದ್ ಅಮ್ಚಿನಡ್ಕ, ಕಾಂಗ್ರೆಸ್ ಮುಖಂಡ ಸನತ್ ರೈ ಏಳ್ನಾಡುಗುತ್ತು, ಕಾರ್ಮಿಕ ಘಟಕದ ಅಧ್ಯಕ್ಷ ಶರೂನ್ ಸಿಕ್ವೇರಾ, ಬ್ಲಾಕ್ ಕಾರ್ಯದರ್ಶಿ ಹಬೀಬ್ ಕಣ್ಣೂರು, ಕಾಂಗ್ರೆಸ್ ಯಂಗ್ ಬ್ರಗೇಡ್‌ನ ಶರೀಫ್ ಬಲ್ನಾಡು, ಎನ್‌ಎಸ್‌ಯುಇ ಪ್ರಧಾನ ಕಾರ್ಯದರ್ಶಿ ಎಡ್ವರ್ಡ್, ಜಿಲ್ಲಾ ಎನ್‌ಎಸ್‌ಯುಐ ಮುಖಂಡ ಬಾತೀಷ ಅಳಕೆಮಜಲು, ಉನೈಸ್ ಗಡಿಯಾರ್, ವಿಕ್ಟರ್ ಪಾಯಸ್, ಹನೀಫ್, ರಮೇಶ್, ಸುಹೈಲ್ ಮೊದಲಾದವರು ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ತಂಡದ ಸಹಾಯವಾಣಿ ಸಂಖ್ಯೆ 9901201139, 9481717322, 9900675420, 8762119527, 9880686992ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here