ಉಪ್ಪಿನಂಗಡಿ: 2021-22ರ ನಾಟಾ ಪ್ರವೇಶ ಪರೀಕ್ಷೆಯಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಮನುಶ್ರೀ ರಾಷ್ಟ್ರೀಯ ಮಟ್ಟದಲ್ಲಿ 134 ಅಂಕ ಗಳಿಸಿ ತೇರ್ಗಡೆ ಹೊಂದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಎಚ್.ಕೆ. ಪ್ರಕಾಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮನುಶ್ರೀ ಪೆರ್ನೆ ನಿವಾಸಿ ಧರ್ನಪ್ಪ ಮತ್ತು ಕುಸುಮ ದಂಪತಿ ಪುತ್ರಿಯಾಗಿದ್ದಾರೆ.