ಬಿಜೆಪಿಯ ಹಿರಿಯ ಮುಖಂಡ ಭಾನುಪ್ರಕಾಶ್ ವಿಧಿವಶ-ಜೂ. 21ರಂದು ಪುತ್ತೂರಿನಲ್ಲಿ ನಡೆಯಬೇಕಾಗಿದ್ದ ಅಭಿನಂದನಾ ಸಭೆ ರದ್ದು

0

ಪುತ್ತೂರು: ಬಿಜೆಪಿಯ ಹಿರಿಯ ಮುಖಂಡ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್ ಅವರು ಜೂ.17ರಂದು ನಿಧನರಾದ ಹಿನ್ನಲೆಯಲ್ಲಿ ದ.ಕ.ಜಿಲ್ಲೆಯ ಸಂಜೆ ನಡೆಯಬೇಕಾಗಿದ್ದ ವಿಜಯೋತ್ಸವ ರದ್ದುಗೊಳಿಸಲಾಗಿದೆ. ಅದರಂತೆ ಜೂ.21ರಂದು ಪುತ್ತೂರಿನಲ್ಲಿ ನಡೆಯಬೇಕಾಗಿದ್ದ ಅಭಿನಂದನಾ ಕಾರ್ಯಕ್ರಮವನ್ನೂ ಕೂಡಾ ರದ್ದುಗೊಳಿಸಲಾಗಿದೆ ಎಂದು ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ತಿಳಿಸಿದ್ದಾರೆ.


ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಶಿವಮೊಗ್ಗದಲ್ಲಿ ನಡೆಸಿದ ಪ್ರತಿಭಟನೆ ವೇಳೆ ಭಾಗಿಯಾಗಿದ್ದ ಎಂ.ಬಿ.ಭಾನುಪ್ರಕಾಶ್ ಅವರು ದಿಡೀರ್ ಅಸ್ವಸ್ಥರಾಗಿ ಕುಸಿದು ಬಿದ್ದು ಸಾವನ್ನಪ್ಪಿದರು. ಬಿಜೆಪಿಯ ಹಿರಿಯ ಮುಖಂಡ ನಿಧನರಾದ ಹಿನ್ನೆಲೆಯಲ್ಲಿ ಬಿಜೆಪಿ ತನ್ನೆಲ್ಲ ಕಾರ್ಯಕ್ರಮ ರದ್ದುಗೊಳಿಸಿದೆ.

LEAVE A REPLY

Please enter your comment!
Please enter your name here