ಬಡಗನ್ನೂರು ಸ.ಉ.ಹಿ.ಪ್ರಾ ಶಾಲಾ ಶತಮಾನೋತ್ಸವ ಆಚರಣೆಯ ಪೂರ್ವಭಾವಿ ಸಭೆ

0

ಬಡಗನ್ನೂರುಃ ಬಡಗನ್ನೂರು ಸ.ಉ.ಹಿ.ಪ್ರಾ ಶಾಲಾ ಶತಮಾನೋತ್ಸವ ಆಚರಣೆಯ ಪೂರ್ವಭಾವಿ ಸಭೆ ಜೂ.16 ರಂದು ನಡೆಯಿತು.

ಶತಮಾನದ ಅಂಚಿನಲ್ಲಿರುವ ಶಾಲೆಗೆ 3 ಕೊಠಡಿಗಳನ್ನ ಹೊಂದುವ ಕಟ್ಟಡದ ಅವಶ್ಯಕತೆ ಇದ್ದು ಈ ಬಗ್ಗೆ ಸರ್ಕಾರದಿಂದ ಹಾಗೂ ಇತರ ಮೂಲದಿಂದ ಅನುದಾನ ಪಡೆಯುವ ನಿಟ್ಟಿನಲ್ಲಿ   ಎರಡು ವಿಬಾಗ ಮಾಡಿ ಅದರ ಜವಾಬ್ದಾರಿಯನ್ನು ಒಬ್ಬೊಬ್ಬರಿಗ ವಹಿಸುವುದು. ಮತ್ತು ಶಾಲೆಯಲ್ಲಿ ಇಷ್ಟರವರೆಗೆ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ಬೇರೆ ಬೇರೆ ವೃತ್ತಿಯಲ್ಲಿದ್ದು ಅವರನ್ನೆಲ್ಲಾ ಒಟ್ಟು ಗೂಡಿಸುವ ನಿಟ್ಟಿನಲ್ಲಿ ವಾಟ್ಸಪ್ ಗುಂಪು ಮಾಡುವ ಬಗ್ಗೆ ಸಭೆಯಲ್ಲಿ ನಿರ್ಣಯ ಮಾಡಲಾಯಿತು.

ಜು. 16 ರಂದು ಶತಮಾನೋತ್ಸವ ತಿಂಗಳ ಕಾರ್ಯಕ್ರಮಕ್ಕೆ ಚಾಲನೆ
ಜು 16 ರಂದು ಸ್ವಚ್ಚತಾ ಕಾರ್ಯಕ್ರಮ ಮೂಲಕ ತಿಂಗಳ ಕಾರ್ಯಕ್ರಮವನ್ನು ಚಾಲನೆ ನೀಡಲಾಗವುದು. ಜು.21ರಂದು ಅಟಿಕೂಟ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಸಲಾಗುವುದು. ಕಾರ್ಯಕ್ರಮ ಅಂಗವಾಗಿ ಹಿರಿಯ ವಿದ್ಯಾರ್ಥಿಗಳಿಗೆ, ಶಾಲಾ ಮಕ್ಕಳಿಗೆ ಹಾಗೂ ಪೋಷಕರಿಗೆ ಪೂರಕವಾದ ವಿವಿಧ ಸ್ಪರ್ಧೆಯನ್ನು ನಡೆಸಲಾಗುವುದು. ಈ ಕಾರ್ಯಕ್ಕೆ ಎಲ್ಲಾ ಹಿರಿಯ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗುತಿಂಗಳ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಬಾಗವಹಿಸುವಂತೆ ಮಾಡಿಕೊಂಡು ಕೊನೆಯಲ್ಲಿ ಎಲ್ಲರ ಭಾಗವಹಿಸುವಿಕೆಯಿಂದ ಶತಮಾನೋತ್ಸವವನ್ನು ಸಂಭ್ರಮಿಸೋಣ ಎಂದು ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಹೆಳಿದರು.

ಸಭೆಯಲ್ಲಿ ಶತಮಾನೋತ್ಸವ ಸಮಿತಿ ಸಂಚಾಲಕ ಸತೀಶ್ ರೈ ಕಟ್ಟಾವು, ಕಾರ್ಯದರ್ಶಿ ಸಂತೋಷ್ ಆಳ್ವ ಗಿರಿಮನೆ, ಜತೆ ಕಾರ್ಯದರ್ಶಿ ಬಾಬು ಬಿ,  ಕೋಶಾಧಿಕಾರಿ ಸಲಾವುದ್ದಿನ್ ಪದಡ್ಕ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಶಂಕರಿ ಪಟ್ಟೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಬು ಮೂಲ್ಯ, ಉಪಾಧ್ಯಕ್ಷೆ ವಿಜಯಲಕ್ಷ್ಮಿ,  ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ರೈ ಪಳ್ಳತ್ತಾರು, ತುಳುನಾಡು ಟ್ರಸ್ಟ್  ನ ಸುಧಾಕರ ಶೆಟ್ಟಿ, ಹಾಗೂ ಸಮಿತಿ ಸದಸ್ಯರುಗಳು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಶಿಕ್ಷಣ ಅಭಿಮಾನಿಗಳು ಮತ್ತು ಊರಿನವರು ಭಾಗವಹಿದರು.ಶಾಲಾ ಮುಖ್ಯ ಶಿಕ್ಷಕಿ ಹರೀಣಾಕ್ಷಿ ಎ ಸ್ವಾಗತಿಸಿ, ಪ್ರಸ್ತವಿಕ ಮಾತನಾಡಿದರು.ಸಹ ಶಿಕ್ಷಕಿ ರಮ್ಯಾ ವಂದಿಸಿದರು.

LEAVE A REPLY

Please enter your comment!
Please enter your name here