ತಿಂಗಳಾಡಿ: ರೈತ ಉತ್ಪಾದಕ ಸಂಸ್ಥೆಯಿಂದ ಒಳನಾಡು ಮೀನುಗಾರಿಕೆ ಮಾಹಿತಿ ಕಾರ್ಯಾಗಾರ

0

ಪುತ್ತೂರು: ಪುತ್ತೂರ ಮುತ್ತು ರೈತ ಉತ್ಪಾದಕ ಸಂಸ್ಥೆಯಿಂದ ರೈತರಿಗೆ ಒಳನಾಡು ಮೀನುಗಾರಿಕೆ ಮಾಹಿತಿ ಕಾರ್ಯಾಗಾರವು ಕೆದಂಬಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಇತ್ತೀಚಿಗೆ ನಡೆಯಿತು. ಪ್ರಗತಿಪರ ಕೃಷಿಕರು, ಉದ್ಯಮಿಗಳಾದ ಮಿತ್ರ೦ಪಾಡಿ ಪುರಂದರ ರೈಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೂಡಿಯಾರು ರಾಧಾಕೃಷ್ಣ ರೈರವರು ಮಾತನಾಡಿ, ರೈತ ಉತ್ಪಾದಕ ಸಂಸ್ಥೆಯ ವತಿಯಿಂದ ಒಳನಾಡು ಮೀನುಗಾರಿಕೆಯ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಈಗಾಗಲೇ ಕುಂಬ್ರದಲ್ಲಿ ಹಮ್ಮಿಕೊಂಡಿದ್ದೆವು. ರೈತರು ಮೀನುಗಾರಿಕೆಯ ಬಗ್ಗೆ ಮಾಹಿತಿ ಪಡೆದುಕೊಂಡು ಮೀನುಗಾರಿಕೆಯನ್ನು ಮಾಡುವ ಮೂಲಕ ಲಾಭ ಪಡೆದುಕೊಳ್ಳಬಹುದು ಎಂದು ಹೇಳಿದರು. ಸಂಸ್ಥೆಯ ಉಪಾಧ್ಯಕ್ಷ ಹರೀಶ್ ಬೀಜತ್ರೆ ಯವರು ರೈತ ಉತ್ಪಾದಕ ಸಂಸ್ಥೆಯ ಮಹತ್ವವನ್ನು ವಿವರಿಸಿದರು. ಮೀನುಗಾರಿಕ ವಿದ್ಯಾಲಯ ಮಂಗಳೂರು ಇಲ್ಲಿನ ಪ್ರಾಧ್ಯಾಪಕ ಡಾ. ರಾಕೇಶ್ ಕೆ ಹಾಗು ಪ್ರಾಧ್ಯಾಪಕಿ ಮೋನಿಕಾ ರವರು ಒಳನಾಡು ಮೀನುಗಾರಿಕೆ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ನಿರ್ದೇಶಕ ನಾರಾಯಣ ಪೂಜಾರಿ ಕುರಿಕ್ಕಾರ ಸ್ವಾಗತಿಸಿ, ಕಾರ್ಯನಿರ್ವಾಹಣಧಿಕಾರಿ ಪ್ರದೀಪ್ ಪಾಪೆಜಾಲು ವಂದಿಸಿದರು. ಸಂಸ್ಥೆಯ ನಿರ್ದೇಶಕರುಗಳಾದ ಪಿ ಜೈರಾಜ್ ಭಂಡಾರಿ, ರಮೇಶ್ ರೈ ,ಅಜಿತ್ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here