ಸ್ಕಿನ್ ಕ್ಯಾನ್ಸರ್ ಎಂದರೇನು?

0

ಪ್ರತೀ ವರ್ಷ ಮೇ ತಿಂಗಳು ಅಂತರ್ರಾಷ್ಟ್ರೀಯ ಚರ್ಮದ ಕ್ಯಾನ್ಸರ‍್ಸ್‌ನ ಜಾಗೃತಿ / ಅರಿವಿನ ತಿಂಗಳು ಎಂದು ಪರಿಗಣಿಸಲಾಗಿದೆ. ಇದರ ಪ್ರಯುಕ್ತ ಚರ್ಮದ ಕ್ಯಾನ್ಸರ್‌ನ ಬಗ್ಗೆ ತಿಳಿಯೋಣ.


ಸ್ಕಿನ್ ಕ್ಯಾನ್ಸರ್ ಎಂದರೇನು?
ಸ್ಕಿನ್ ಕ್ಯಾನ್ಸರ್ ಅಥವ ಚರ್ಮದ ಕ್ಯಾನ್ಸರ್ ಎಂದರೆ ಚರ್ಮದ ಕೋಶಗಳ ಅಸಹಜ ಬೆಳವಣಿಗೆ. ಇದು ಪ್ರಪಂಚದಲ್ಲಿ ಅತ್ಯಂತ ಸಾಮಾನ್ಯ ಕ್ಯಾನ್ಸರ್‌ಗಳಲ್ಲಿ ಒಂದಾಗಿರುತ್ತದೆ.


ಇದಕ್ಕೆ ಕಾರಣವೇನು?
ಇದಕ್ಕೆ ವಿವಿಧ ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದದ್ದು ಸೂರ್ಯನ ಬೆಳಕಿನಲ್ಲಿರುವ Ultraviolet (UV)ಕಿರಣಗಳು. ಇದನ್ನು ಬಿಟ್ಟರೆ, ಕುಟುಂಬದಲ್ಲಿ ಯಾರಿಗಾದರು ಇದ್ದರೆ, ಕೆಲವು ಕೆಮಿಕಲ್ ಗಳ ಪ್ರಭಾವ, ಅಸಹಜ ಮಚ್ಚೆಗಳು, ತುಂಬಾ ವರ್ಷಗಳಿಂದ ಗುಣವಾಗದ ಗಾಯಗಳು, ಹೀಗೆ ಹಲವಾರು ಕಾರಣಗಳಿವೆ.


ಚರ್ಮದ ಕ್ಯಾನ್ಸರ್‌ನ ಲಕ್ಷಣಗಳೇನು?
ವರ್ಷಗಳಿಂದ ಇದ್ದ ಮಚ್ಚೆಗಳು ದಿಢೀರ್ ಆಗಿ ಅದರ ಬಣ್ಣ / ಆಕಾರ / ಗಾತ್ರಗಳ ಬದಲಾವಣೆ, ಏನೂ ಇಲ್ಲದ ಚರ್ಮದಲ್ಲಿ ದಿಢೀರ್ ಆಗಿ ಗುಳ್ಳೆ ಅಥವಾ ಕೆಡುವಿನಂತಹ ಹೊಸ ಬೆಳವಣಿಗೆ, ವಾಸಿಯಾಗದ ಗಾಯ ಅಥವ ಹುಣ್ಣುಗಳು ಒಮ್ಮೆಗೇ ಸಣ್ಣ ಸಣ್ಣ ಗೆಡ್ಡೆಗಳಾಗಿ ಬೆಳೆಯುವುದು. ಇವುಗಳೆಲ್ಲ ಸಾಮಾನ್ಯವಾದ ಲಕ್ಷಣಗಳು.


ಪತ್ತೆ ಹಚ್ಚುವುದು ಹೇಗೆ?
ಇಂತಹ ಲಕ್ಷಣಗಳಿದ್ದರೆ ವೈದ್ಯರಲ್ಲಿ ಚರ್ಮದ ತಪಾಸಣೆ ಮಾಡಿಸುವ ಮೂಲಕ ಇವನ್ನು ಕಂಡು ಹಿಡಿಯಬಹುದು. ಏನೇ ಅನುಮಾನ ಇದ್ದಲ್ಲಿ, Computer ಮೂಲಕPolarised Dermoscopy Test ಹಾಗೂ ಚರ್ಮದ Biopsy ಮಾಡಿ ಅದು ಕ್ಯಾನ್ಸರ್ ಹೌದಾ ಎಂದು ದೃಡೀಕರಿಸಬಹುದು.


ಚರ್ಮದ ಕ್ಯಾನ್ಸರ್‌ಗೆ ಚಿಕಿತ್ಸೆ ಇದೆಯೇ?
ಹೌದು. ಆರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ ಸಂಪೂರ್ಣವಾಗಿ ಕ್ಯಾನ್ಸರ್ ನಿರ್ಮೂಲನೆ ಮಾಡಬಹುದು. ನಂತರದ ಹಂತಗಳಲ್ಲಿ ಕೂಡಾ ಶಸ್ತ್ರಚಿಕಿತ್ಸೆ, ರೇಡಿಯೇಶನ್ ಹಾಗೂ ಕೀಮೋಥೆರಪಿ, ಇಮ್ಯುನೋಥೆರಪಿ ಒಳಗೊಂಡು ವಿವಿಧ ಚಿಕಿತ್ಸೆಗಳಿವೆ.


ಚರ್ಮದ ಕ್ಯಾನ್ಸರ್ ತಡೆಯಬಹುದೇ?
ಎಲ್ಲಾ ತರಹದ ಚರ್ಮದ ಕ್ಯಾನ್ಸರನ್ನು ತಡೆಯಲಾಗದಿದ್ದರೂ, ತಮ್ಮ ಅಪಾಯವನ್ನು ಕಡಿಮೆ ಮಾಡಬಹುದು. ದೀರ್ಘಕಾಲ ಸೂರ್ಯನ ಕಿರಣಗಳು ಒಂದೇ ಜಾಗದ ಮೇಲೆ ಬೀಳದಹಾಗೆ ನೋಡಿಕೊಳ್ಳುವುದು (ಅದೂ ಮಧ್ಯಾಹ್ನದ ಬಿಸಿಲಿಗೆ), ಬಿಸಿಲಿಗೆ ತುಂಬಾ ಹೊತ್ತು ಹೋಗಲೇ ಬೇಕಾದಲ್ಲಿ ಮುಂಡಾಸು / ಟೋಪಿ / ಕೊಡೆಗಳನ್ನು ಉಪಯೋಗಿಸಿ ಅಥವಾ ಸೂರ್ಯನಕಿರಣಗಳು ಚರ್ಮಕ್ಕೆ ತಾಗದ ಹಾಗೆ Sunscreen Cream ಅನ್ನು ಬಳಸಬಹುದು.


ಮೆಲನೋಮ ಎಂದರೇನು?
ಮೆಲನೋಮವು ಚರ್ಮದ ಕ್ಯಾನ್ಸರ್‌ನ ಅತ್ಯಂತ ಅಪಾಯಕಾರಿ ರೂಪವಾಗಿದೆ. ಇದು ಚರ್ಮದ ವರ್ಣವನ್ನು ಕೊಡುವ ಮೆಲನೋಸೈಟ್ ಎಂಬ ಜೀವಕೋಶದಿಂದ ಹುಟ್ಟಿಕೊಳ್ಳುತ್ತದೆ.
ಇದು ಮೊದಲಿನಿಂದ ಇರುವ ಮಚ್ಚೆಗಳಲ್ಲಿ ಉಂಟಾಗಬಹುದು ಅಥವ ಹೊಸದಾಗಿಯೂ ಕಾಣಿಸಿಕೊಳ್ಳಬಹುದು. ಮೆಲನೋಮ ನೋಡಲು ಮಸಿ ಕಪ್ಪು ಬಣ್ಣದ ಮಚ್ಚೆಯ ಹಾಗೆ ಇರುತ್ತದೆ ಹಾಗು ಅತೀ ವೇಗದಲ್ಲಿ ಗಾತ್ರವು ದೊಡ್ಡದಾಗುತ್ತದೆ. ಮೆಲನೋಮವು ದೇಹದ ಎಲ್ಲಾ ಕ್ಯಾನ್ಸರ್ ಗಳಲ್ಲಿ ಅತ್ಯಂತ ವೇಗವಾಗಿ ದೇಹದ ಬೇರೆ ಭಾಗಗಳಿಗೆ ಹರಡುವುದರಿಂದ
ಮನುಷ್ಯನ ದೇಹದ ಅತ್ಯಂತ ಅಪಾಯಕಾರಿ ಕ್ಯಾನ್ಸರ್ ಗಳಲ್ಲಿ ಒಂದಾಗಿದೆ.

ಡಾ| ಸಚಿನ್ ಮನೋಹರ್ ಶೆಟ್ಟಿ
ಚರ್ಮ್ ರೋಗ ತಜ್ಞರು
ಪುತ್ತೂರು ಸ್ಕಿನ್ ಕ್ಲಿನಿಕ್ ಮತ್ತು ಲೇಸರ್ ಸೆಂಟರ್
ಬೊಳ್ವಾರು, ಪುತ್ತೂರು.
ಮೊ: 8296296888

LEAVE A REPLY

Please enter your comment!
Please enter your name here