NUCAT ಸ್ಪರ್ಧಾತ್ಮಕ ಪರೀಕ್ಷೆ: ಉಪ್ಪಿನಂಗಡಿ ಇಂದ್ರಪ್ರಸ್ಥ ಕಾಲೇಜು ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

0

ಉಪ್ಪಿನಂಗಡಿ: ನಿಟ್ಟೆ ಎಂಜಿನಿಯರಿಂಗ್ ಕಾಲೇಜು (ನಿಟ್ಟೆ ವಿಶ್ವವಿದ್ಯಾನಿಲಯ) ನಡೆಸುವ 2022ನೇ ಸಾಲಿನ NUCAT ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಎಚ್.ಕೆ. ಪ್ರಕಾಶ್ ಪತ್ರಿಕಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳಾದ ಆದರ್ಶ್ ಎ.ಎಸ್.-115ನೇ ರ‍್ಯಾಂಕ್ ಪಡೆದಿರುತ್ತಾರೆ. ಇವರು ಬೆಳಿಯೂರು ನಿವಾಸಿ ಆನಂದ ಪೂಜಾರಿ ಎಸ್. ಮತ್ತು ಶೋಭಾ ಬಿ. ದಂಪತಿಯ ಪುತ್ರರಾಗಿರುತ್ತಾರೆ. ರಿತೇಶ್-141ನೇ ರ‍್ಯಾಂಕ್ ಪಡೆದಿರುತ್ತಾರೆ. ಇವರು ಪೆರ್ನೆ ನಿವಾಸಿ ಎಮ್. ಹರೀಶ್ ನಾಯಕ್ ಮತ್ತು ವಿದ್ಯಾ ದಂಪತಿಯ ಪುತ್ರರಾಗಿರುತ್ತಾರೆ. ಪ್ರಜ್ವಲ್ ಪಿ. ಲದ್ವ-266ನೇ ರ‍್ಯಾಂಕ್ ಪಡೆದಿರುತ್ತಾರೆ. ಇವರು ನಟ್ಟಿಬೈಲ್ ನಿವಾಸಿ ಪರಶುರಾಮ್ ಲದ್ವ ಮತ್ತು ಸುಮನ್ ಪಿ ಲದ್ವ ದಂಪತಿಯ ಪುತ್ರರಾಗಿರುತ್ತಾರೆ ಎಂದು ಸಂಸ್ಥೆಯ ಪ್ರಾಂಶುಪಾಲ ಎಚ್.ಕೆ. ಪ್ರಕಾಶ್ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here