ಆನಡ್ಕ  ಸ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಆನಡ್ಕ  ಸ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಮೂರು ದಿನಗಳ ಹರ್ ಘರ್ ತಿರಂಗಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶ್ರೀ ನಾರಾಯಣ ನೆರವೇರಿಸಿದರು. ವಿಶೇಷ ಅತಿಥಿಗಳಾಗಿ ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸುತ್ತಿರುವ ಶ್ರೀ ವಸಂತ ಸಾರಕರೆ ಮತ್ತು ಶ್ರೀ ವಿಶ್ವನಾಥ ಮುಂಡೋಡಿ ಇವರು ಶುಭಹಾರೈಸಿದರು. ಆ ಬಳಿಕ ಊರಿನ ಗಣ್ಯರು, ಪೋಷಕರು,ಹಿರಿಯ ವಿದ್ಯಾರ್ಥಿಗಳು ಎಸ್.ಡಿ.ಎಂ.ಸಿ.ಸದಸ್ಯರು, ನರಿಮೊಗರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ದಿನೇಶ್ ಮಜಲು ಮತ್ತು ತಾರಾನಾಥ ಹಾಗೂ ಗುರುವೃಂದ ಮತ್ತು ವಿದ್ಯಾರ್ಥಿಗಳೊಂದಿಗೆ ವೈಭವದ ಮೆರವಣಿಗೆ ವಾದ್ಯಘೋಷದೊಂದಿಗೆ ನಡೆಯಿತು. ಆನಡ್ಕದಲ್ಲಿ ಶ್ರೀ ವಿಷ್ಣು ಯುವಕ ಮಂಡಲದವರು ಸಿಹಿ ತಿಂಡಿ ವಿತರಣೆ ಮಾಡಿದರು. ಆ ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಶುಭಲತಾ ಎಲ್ಲರನ್ನೂ ಸ್ವಾಗತಿಸಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಉಪನ್ಯಾಸ ನೀಡಿದರು.

ಗಣ್ಯರಾದ ಶ್ರೀ ಬಾಲಕೃಷ್ಣ ನಾಯಕ್ ಮತ್ತು ಶ್ರೀ ಜಯರಾಮ ಭಟ್ ಬಹುಮಾನ ವಿತರಣೆ ಗೈದರು. ವಿದ್ಯಾರ್ಥಿಗಳು ಆಜಾದಿಕಾ ಅಮೃತ ಮಹೋತ್ಸವದ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಸುಂದರವಾಗಿ ನಡೆಸಿಕೊಟ್ಟರು. ಶಿಕ್ಷಕಿ ಅಕ್ಷತಾ ನಿರೂಪಣೆ ಗೈದರು. ಶಿಕ್ಷಕಿ ಮಾಲತಿ ವಂದಿಸಿದರು. ಶಿಕ್ಷಕಿ ಫೆಲ್ಸಿಟಾ,ಸೌಮ್ಯ,ಲೀಲಾವತಿ ಸಹಕರಿಸಿದರು. ಸಿಹಿಯೂಟದೊಂದಿಗೆಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here