ಪುತ್ತೂರು: ಬೆಟ್ಟಂಪಾಡಿ ಶಿವಗಂಗಾ ಬೀಡು ನಿವಾಸಿಯಾಗಿದ್ದ ಜಯಪ್ರಭಾಕರ ಬಲ್ಲಾಳ್ರವರ ಉತ್ತರಕ್ರಿಯೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಮೇ.16ರಂದು ಪುತ್ತೂರು ಶ್ರೀಮಹಾಮಾಯಾ ದೇವಸ್ಥಾನದ ಸೇವಾಸದನದಲ್ಲಿ ನಡೆಯಿತು.
ಸೀತಾರಾಮ ಬಲ್ಲಾಳ್ ಚಿಪ್ಪಾರು ಹಾಗೂ ಸುದರ್ಶನ ಬಲ್ಲಾಳ್ ಪೈವಳಿಕೆರವರು ನುಡಿನಮನ ಸಲ್ಲಿಸಿದರು. ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸಲಾಯಿತು.
ಮೃತರ ತಾಯಿ ಶಾರದಾ, ಪತ್ನಿ ವಿನುತಾ, ಪುತ್ರ ಆರ್ಯನ್ ರಾಜ್ ಬಲ್ಲಾಳ್, ಬಾವಂದಿರಾದ ಸತೀಶ್ ಬಲ್ಲಾಳ್, ರಘಚಂದ್ರ ಬಲ್ಲಾಳ್, ಸಹೋದರಿಯರಾದ ಮಮತ,
ನಂದಿನಿ, ಗಂಗಾಧರ ಬಲ್ಲಾಳ್ ಬೆಳ್ಳೂರು, ಚಂದ್ರಹಾಸ ಬಲ್ಲಾಳ್ ಕೆದಂಬಾಡಿ, ಜಗದೀಶ ಬಲ್ಲಾಳ್ ಕೆದಂಬಾಡಿ, ಗಂಗಾಧರ ಬಲ್ಲಾಳ್ ಕೆದಂಬಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.